ಕಾಮನ್‌ವೆಲ್ತ್ ಕ್ರೀಡಾಕೂಟ: ಶೂಟಿಂಗ್ ನಲ್ಲಿ ಓಂ ಮಿಥರ್ವಾಲ್‌ಗೆ ಕಂಚು

Update: 2018-04-11 03:25 GMT

ಗೋಲ್ಡ್ ಕೋಸ್ಟ್, ಎ. 11: ಕಾಮನ್‌ವೆಲ್ತ್ ಕ್ರೀಡಾಕೂಟದ ಏಳನೇ ದಿನವಾದ ಬುಧವಾರ ಭಾರತದ ಶೂಟರ್ ಓಂ ಮಿಥರ್ವಾಲ್ ಅವರು ಪುರುಷರ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.

ತೀವ್ರ ಪೈಪೋಟಿ ಇದ್ದ ಸ್ಪರ್ಧೆಯಲ್ಲಿ 18 ಶೂಟ್‌ಗಳ ಬಳಿಕ ಅಗ್ರಸ್ಥಾನದಲ್ಲಿದ್ದ ಮಿಥರ್ವಾಲ್ ಅವರನ್ನು 20ನೇ ಶೂಟ್ ವೇಳೆ ಎರಡನೇ ಸ್ಥಾನಕ್ಕೆ ಹಿಂದಿಕ್ಕುವಲ್ಲಿ ಆಸ್ಟ್ರೇಲಿಯಾದ ಡೇನಿಯಲ್ ರಿಪಚೋಲಿ ಯಶಸ್ವಿಯಾದರು. ಅಂತಿಮವಾಗಿ ಮಿಥರ್ವಾಲ್ ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಹಾಲಿ ಜಾಂಪಿಯನ್ ಜಿತು ರಾಯ್ ಫೈನಲ್‌ನಲ್ಲಿ ಮೊದಲಿಗರಾಗಿ ಹೊರಬಿದ್ದು ನಿರಾಸೆ ಮೂಡಿಸಿದರು.

45-48 ಕೆಜಿ ವಿಭಾಗದ ಮಹಿಳೆಯರ ಕುಸ್ತಿಯಲ್ಲಿ ಭಾರತದ ಮೇರಿ ಕೋಮ್ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ಲಿ ಅವರು ಶ್ರೀಲಂಕಾದ ಅನುಷಾ ದಿಲ್ರುಕ್ಷಿ ಕೊದ್ದಿತುವಕ್ಕು ಅವರನ್ನು ಸೋಲಿಸಿದರು.

ಸ್ಕ್ವಾಷ್‌ನಲ್ಲಿ ಭಾರತದ ವಿಕ್ರಮ್ ಮಲ್ಹೋತ್ರಾ ಮತ್ತು ರಮೀತ್ ಟಂಡನ್ ಜೋಡಿ, ವೇಲ್ಸ್‌ನ ಪೀಟರ್ ಕ್ರೀಡ್ ಹಾಗೂ ಜೋಯೆಲ್ ಮಕಿನ್ ಅವರನ್ನು ಪುರುಷರ ಡಬಲ್ಸ್‌ನ ಎಫ್ ಗುಂಪಿನ ಪಂದ್ಯದಲ್ಲಿ ಸೋಲಿಸಿ ಮುನ್ನಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News