​ಐಪಿಎಲ್ :ರಾಜಸ್ಥಾನ ರಾಯಲ್ಸ್‌ನ ಬ್ಯಾಟಿಂಗ್‌ಗೆ ಮಳೆ ಅಡ್ಡಿ

Update: 2018-04-11 16:25 GMT

 ಜೈಪುರ, ಎ.11: ಐಪಿಎಲ್‌ನ ಟ್ವೆಂಟಿ- 20 ಟೂರ್ನಿಯ 6ನೇ ಪಂದ್ಯದಲ್ಲಿ ಬುಧವಾರ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ  17.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 153 ರನ್ ಗಳಿಸಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿಗೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ (45) ಮತ್ತು ಸಂಜು ಸ್ಯಾಮ್ಸನ್(37) ಅವರು  ಉಪಯುಕ್ತ ಕೊಡುಗೆ ನೀಡಿದರು.
 4.1 ಓವರ್‌ಗಳಲ್ಲಿ 28ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ರಾಜಸ್ಥಾನ ರಾಯಲ್ಸ್ ಪರ ಸ್ಯಾಮ್ಸನ್ ಮತ್ತು ರಹಾನೆ ಮೂರನೇ ವಿಕೆಟ್‌ಗೆ 62 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 11 ಓವರ್‌ಗಳಲ್ಲಿ 90ಕ್ಕೇರಿಸಿದರು.
  ವಿಕೆಟ್ ಕೀಪರ್ ಜೋ ಬಟ್ಲರ್ 29 ರನ್, ಬೆನ್ ಸ್ಟೋಕ್ಸ್ 16 ರನ್, ಡಿ ಅರ್ಕಿ ಶೋರ್ಟ್ 6 ರನ್, ರಾಹುಲ್ ತ್ರಿಪಾಠಿ ಔಟಾಗದೆ 15 ರನ್ ಮತ್ತು ಕೃಷ್ಣಪ್ಪ ಗೌತಮ್ 2 ರನ್ ಗಳಿಸಿ ಆಡುತ್ತಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು.
ಶಹಬಾಝ್ ನದೀಮ್ 34ಕ್ಕೆ 2 , ಟ್ರೆಂಟ್ ಬೌಲ್ಟ್ ಮತ್ತು ಮುಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News