ಕಾಮನ್‌ವೆಲ್ತ್: ಕುಸ್ತಿಯಲ್ಲಿ ಫೈನಲ್‌ ತಲುಪಿದ ಸುಶೀಲ್ ಕುಮಾರ್

Update: 2018-04-12 03:58 GMT

ಗೋಲ್ಡ್‌ಕೋಸ್ಟ್, ಎ.12: ಕಾಮನ್‌ವೆಲ್ತ್ ಕ್ರೀಡಾಕೂಟದ ಎಂಟನೇ ದಿನವಾದ ಇಂದು ಭಾರತದ ಸ್ಟಾರ್ ಕುಸ್ತಿಪಟು ಸುಶೀಲ್ ಕುಮಾರ್ ಅವರು 74 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಆಸ್ಟ್ರೇಲಿಯಾದ ಕೊನಾನ್ ಇವಾನ್ಸ್ ಅವರನ್ನು ಸೆಮಿಫೈನಲ್‌ನಲ್ಲಿ ಸೋಲಿಸಿದ ಸುಶೀಲ್‌ಕುಮಾರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬೋಥಾ ಅವರನ್ನು ಎದುರಿಸುವರು.

57 ಜೆ.ಜಿ. ಫ್ರೀಸ್ಟೈಲ್ ಪುರುಷರ ವಿಭಾಗದಲ್ಲಿ ಭಾರತದ ರಾಹುಲ್ ಅವಾರ್, ಪಾಕಿಸ್ತಾನದ ಮುಹಮ್ಮದ್ ಬಿಲಾಲ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಭಾರತದ ಬಬಿತಾ ಪೋಗತ್ ಕೂಡಾ ಫೈನಲ್ ಪ್ರವೇಶಿಸಿದ್ದಾರೆ. ಭಾರತದ ಕಿರಣ್ ಕಂಚಿನ ಪದಕಕ್ಕೆ ಸೆಣೆಸಲಿದ್ದಾರೆ.

ಬ್ಯಾಡ್ಮಿಂಟನ್ ಮಿಕ್ಸ್‌ಡ್ ಡಬಲ್ಸ್‌ನಲ್ಲಿ ಪ್ರಣವ್ ಚೋಪ್ರಾ ಎನ್.ಸಿಕ್ಕಿ ರೆಡ್ಡಿ ಜೋಡಿ, ಸಿಂಗಾಪುರದ ಎದುರಾಳಿಗಳನ್ನು 21-9, 21-13 ಅಂತರದಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದಿದೆ. ಭಾರತದ ಸ್ವಸ್ತಿಕ್‌ರಾಜ್- ಅಶ್ವಿನಿ ಪೊನ್ನಪ್ಪ ಜೋಡಿ ಕೂಡಾ ಮಿಕ್ಸ್‌ಡ್ ಡಬಲ್ಸ್ ಕ್ವಾರ್ಟರ್ ಫೈನಲ್ ತಲುಪಿದೆ. ಈ ಜೋಡಿ 16ರ ಘಟ್ಟದ ಪಂದ್ಯದಲ್ಲಿ ಕೆನಡಾದ ಕ್ರಿಸ್ಟೆನ್ ತ್ಸಾಯ್- ನೈಲ್ ಯಕೂರಾ ಜೋಡಿಯನ್ನು 21-10, 21-7 ನೇರ ಸೆಟ್ಟುಗಳಿಂದ ಮಣಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News