ರಶ್ಯದ ಮೇಲೆ ಸೈಬರ್ ದಾಳಿ: ಬ್ರಿಟನ್ ಎಚ್ಚರಿಕೆ

Update: 2018-04-15 18:03 GMT

ಲಂಡನ್, ಎ. 15: ರಶ್ಯವು ಬ್ರಿಟಿಶ್ ರಾಷ್ಟ್ರೀಯ ಮೂಲಸೌಕರ್ಯದ ಮೇಲೆ ಕಣ್ಣು ಹಾಕಿದರೆ, ಅದಕ್ಕೆ ಪ್ರತಿಯಾಗಿ ರಶ್ಯದ ವಿರುದ್ಧ ಸೈಬರ್ ದಾಳಿ ನಡೆಸುವ ಬಗ್ಗೆ ಬ್ರಿಟನ್ ಪರಿಶೀಲನೆ ನಡೆಸಲಿದೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ‘ಸಂಡೇ ಟೈಮ್ಸ್’ ವರದಿ ಮಾಡಿದೆ.

ರಶ್ಯದ ಮಾಜಿ ಬೇಹುಗಾರ ಮತ್ತು ಅವರ ಮಗಳ ಮೇಲೆ ಬ್ರಿಟನ್‌ನಲ್ಲಿ ರಾಸಾಯನಿಕ ದಾಳಿ ನಡೆದ ಬಳಿಕ, ಈ ಎರಡು ದೇಶಗಳ ನಡುವಿನ ಸಂಬಂಧ ಪಾತಾಳಕ್ಕೆ ಕುಸಿದಿದೆ. ಈ ದಾಳಿಗೆ ರಶ್ಯ ಕಾರಣ ಎಂಬುದಾಗಿ ಆರೋಪಿಸಿದ್ದ ಬ್ರಿಟನ್ ತನ್ನ ದೇಶದಿಂದ ಭಾರೀ ಸಂಖ್ಯೆಯ ರಶ್ಯ ರಾಜತಾಂತ್ರಿಕರನ್ನು ಉಚ್ಚಾಟಿಸಿತ್ತು. ಅದಕ್ಕೆ ಪ್ರತೀಕಾರವಾಗಿ ತನ್ನ ದೇಶದಿಂದ ಅಷ್ಟೇ ಸಂಖ್ಯೆಯ ಬ್ರಿಟನ್ ರಾಜತಾಂತ್ರಿಕರನ್ನು ರಶ್ಯ ಉಚ್ಚಾಟಿಸಿತ್ತು.

 ಎರಡು ದೇಶಗಳ ನಡುವಿನ ಹಳಸಿದ ಸಂಬಂಧಕ್ಕೆ ಪ್ರಮುಖ ಕಾರಣ ಸೈಬರ್ ದಾಳಿ. ರಶ್ಯದ ಅಸ್ವೀಕಾರಾರ್ಹ ಸೈಬರ್ ವರ್ತನೆಯನ್ನು ನಿರಂತರವಾಗಿ ಬಹಿರಂಗಪಡಿಸುವುದಾಗಿ ಬ್ರಿಟಿಶ್ ಬೇಹುಗಾರಿಕಾ ಸಂಸ್ಥೆ ಜಿಸಿಎಚ್‌ಕ್ಯೂ ಮುಖ್ಯಸ್ಥ ಗುರುವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News