×
Ad

ಶರೀಫ್ ಪ್ರಕರಣಗಳ ಉಸ್ತುವಾರಿಯ ನ್ಯಾಯಾಧೀಶರ ಮನೆಗೆ ಗುಂಡು

Update: 2018-04-15 23:36 IST
ಇಜಾಝ್ ಉಲ್ ಅಹ್ಸಾನ್‌

ಲಾಹೋರ್, ಎ. 15: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಉಸ್ತುವಾರಿ ಹೊತ್ತಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರ ನಿವಾಸದ ಮೇಲೆ ಬಂದೂಕುಧಾರಿಗಳು ರವಿವಾರ ಗುಂಡು ಹಾರಿಸಿದ್ದಾರೆ.

ಮೋಡಲ್ ಟೌನ್ ಲಾಹೋರ್‌ನಲ್ಲಿರುವ ನ್ಯಾಯಮೂರ್ತಿ ಇಜಾಝ್ ಉಲ್ ಅಹ್ಸಾನ್‌ರ ನಿವಾಸದ ಮೇಲೆ ನಡೆದ ದಾಳಿಯ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ದಾಳಿಯಲ್ಲಿ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ನ್ಯಾಯಮೂರ್ತಿ ಅಹ್ಸಾನ್‌ರ ನಿವಾಸದ ಮೇಲೆ ಮುಂಜಾನೆ 4:30ಕ್ಕೆ ಹಾಗೂ ಬೆಳಗ್ಗೆ 9 ಗಂಟೆಗೆ- ಒಟ್ಟು ಎರಡು ಬಾರಿ ಗುಂಡು ಹಾರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಘಟನೆಯ ಬಳಿಕ, ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ ಮಿಯಾಂ ಸಾಕಿಬ್ ನಿಸಾರ್ ನ್ಯಾ. ಅಹ್ಸಾನ್‌ರ ನಿವಾಸಕ್ಕೆ ಧಾವಿಸಿದರು ಹಾಗೂ ಪಂಜಾಬ್ ಪೊಲೀಸ್ ಮುಖ್ಯಸ್ಥರನ್ನು ಸ್ಥಳಕ್ಕೆ ಕರೆಸಿದರು.

ಸ್ವತಃ ಮುಖ್ಯ ನ್ಯಾಯಾಧೀಶರೇ ತನಿಖೆಯ ಮೇಲುಸ್ತುವಾರಿ ವಹಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News