ಅಫ್ಘಾನ್: ಉಗ್ರ ದಾಳಿಯಲ್ಲಿ 11 ಅರೆ ಸೈನಿಕರ ಹತ್ಯೆ
Update: 2018-04-15 23:56 IST
ಕಾಬೂಲ್, ಎ. 15: ಅಫ್ಘಾನ್ ಅರೆಸೈನಿಕ ಪಡೆಗಳ ತಪಾಸಣಾ ಠಾಣೆಯೊಂದರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 11 ಸೈನಿಕರು ಹತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ನಡೆದ ದಾಳಿಯಲ್ಲಿ ಇಬ್ಬರು ಸೈನಿಕರು ಗಾಯಗೊಂಡರು ಉತ್ತರ ಅಫ್ಘಾನಿಸ್ತಾನದ ಪ್ರಾಂತ ಸರಿ ಪುಲ್‌ನ ಗವರ್ನರ್‌ರ ವಕ್ತಾರರೊಬ್ಬರು ತಿಳಿಸಿದರು.
ಘರ್ಷಣೆಯಲ್ಲಿ ಸ್ಥಳೀಯ ಕಮಾಂಡರ್ ಸೇರಿದಂತೆ 3 ಭಯೋತ್ಪಾದಕರು ಹತರಾಗಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ.