ಜೊಕೊವಿಕ್ ಮೂರನೇ ಸುತ್ತಿಗೆ ಲಗ್ಗೆ

Update: 2018-04-18 18:08 GMT

ಮಾಂಟೆ ಕಾರ್ಲೊ(ಮೊನಾಕೊ), ಎ.18: ವಿಶ್ವದ ಮಾಜಿ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

 ಬುಧವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 12 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಅವರು ಬೊರ್ನ ಕಾರಿಕ್‌ರನ್ನು 7-6(7/2), 7-5 ಸೆಟ್‌ಗಳಿಂದ ಮಣಿಸಿದರು. ಕಳೆದ ವರ್ಷದ ಜುಲೈನಲ್ಲಿ ವಿಂಬಲ್ಡನ್ ಟೂರ್ನಿಯಲ್ಲಿ ಆಡಿದ ಬಳಿಕ ಮಣಿಕಟ್ಟು ನೋವಿಗೆ ಒಳಗಾಗಿದ್ದ ಜೊಕೊವಿಕ್ ಕೇವಲ ನಾಲ್ಕು ಟೂರ್ನಮೆಂಟ್‌ಗಳನ್ನು ಆಡಿದ್ದಾರೆ. ಸರ್ಬಿಯ ಆಟಗಾರ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ಐದನೇ ಶ್ರೇಯಾಂಕದ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ. ಒಂದು ವೇಳೆ ಕ್ವಾರ್ಟರ್ ಫೈನಲ್‌ಗೆ ತಲುಪಿದರೆ ಹಾಲಿ ಚಾಂಪಿಯನ್ ರಫೆಲ್ ನಡಾಲ್‌ರನ್ನು ಎದುರಿಸಲಿದ್ದಾರೆ. ರಫೆಲ್ ಅವರು ಅಲ್‌ಜಾಝ್ ಬೆಡೆನೆ ಅವರನ್ನು ಮುಖಾಮುಖಿಯಾಗಲಿದ್ದಾರೆ.

►ನಿಶಿಕೊರಿಗೆ ಜಯ:

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಜಪಾನ್‌ನ ಕೀ ನಿಶಿಕೊರಿ ರಶ್ಯದ ಡ್ಯಾನಿಲ್ ಮೆಡ್ವೆಡೊವ್‌ರನ್ನು 7-5, 6-2 ಅಂತರದಿಂದ ಮಣಿಸುವ ಮೂಲಕ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ವಿಶ್ವದ ಮಾಜಿ ನಂ.4ನೇ ಆಟಗಾರ ನಿಶಿಕೊರಿ ಕಳೆದ ಒಂದು ವರ್ಷದಿಂದ ಬಲಗೈಗಂಟುನೋವಿನಿಂದ ಬಳಲುತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಥಾಮಸ್ ಬೆರ್ಡಿಕ್‌ರನ್ನು ಮಣಿಸಿರುವ ನಿಶಿಕೊರಿ ಮುಂದಿನ ಸುತ್ತಿನಲ್ಲಿ ಗುಲೆರ್ಮೊ ಗಾರ್ಸಿಯಾ-ಲೊಪೆಝ್ ಅಥವಾ ಆ್ಯಂಡ್ರಿಯಸ್ ಸೆಪ್ಪಿ ಅವರನ್ನು ಎದುರಿಸಲಿದ್ದಾರೆ.

           

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News