×
Ad

ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಪೂರೈಸಿದ ವಿರಾಟ್ ಕೊಹ್ಲಿ

Update: 2018-04-18 23:46 IST

ಹೊಸದಿಲ್ಲಿ, ಎ.18: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ 62 ಎಸೆತಗಳಲ್ಲಿ 92 ರನ್ ಗಳಿಸಿದ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ, ಕೊಹ್ಲಿ ಪ್ರಯತ್ನದ ಹೊರತಾಗಿಯೂ ಆರ್‌ಸಿಬಿ ತಂಡ ಮುಂಬೈ ವಿರುದ್ಧ 46 ರನ್‌ಗಳಿಂದ ಸೋತಿತ್ತು. ಈ ವರ್ಷದ ಟೂರ್ನಮೆಂಟ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿತು. ಕೊಹ್ಲಿ 153 ಐಪಿಎಲ್ ಪಂದ್ಯಗಳಲ್ಲಿ 4,619 ರನ್ ಗಳಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ದಾಂಡಿಗ ಸುರೇಶ್ ರೈನಾ ನಿರ್ಮಿಸಿದ್ದ (4,558)ಗರಿಷ್ಠ ರನ್ ದಾಖಲೆಯನ್ನು ಮುರಿದರು. ‘‘ನನಗೆ ಆರೆಂಜ್ ಕ್ಯಾಪ್ ಧರಿಸಿದ್ದೇನೆಂದು ಅನಿಸುತ್ತಿಲ್ಲ. ಏಕೆಂದರೆ ಇದೊಂದು ನಿಜವಾದ ವಿಚಾರವಲ್ಲ. ನಾವು ಕಠಿಣ ಶ್ರಮಪಡುತ್ತಿದ್ದೇವೆ. ಆದರೆ,ಅದಕ್ಕೆ ಫಲ ಸಿಗುತ್ತಿಲ್ಲ’’ಎಂದು ಈ ವರ್ಷದ ಐಪಿಎಲ್‌ನಲ್ಲಿ 4 ಪಂದ್ಯಗಳಲ್ಲಿ 201 ರನ್ ಗಳಿಸಿರುವ ಕೊಹ್ಲಿ ಹೇಳಿದ್ದಾರೆ. 29ರ ಹರೆಯದ ಕೊಹ್ಲಿ ಮೊದಲ ಐಪಿಎಲ್ ಆರಂಭವಾದ 2008ರಿಂದ ಬೆಂಗಳೂರು ತಂಡದಲ್ಲಿದ್ದಾರೆ. ಈ ವರೆಗೆ ಅವರಿಗೆ ಟ್ವೆಂಟಿ-20 ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News