ಬರ್ಮಿಂಗ್‌ಹ್ಯಾಮ್ ಓಪನ್ ಟೆನಿಸ್‌ಗೆ ಶರಪೋವಾ

Update: 2018-04-18 18:19 GMT

ಲಂಡನ್, ಎ.18: ವಿಶ್ವದ ಮಾಜಿ ನಂ.1 ಆಟಗಾರ್ತಿ ಮರಿಯಾ ಶರಪೋವಾ ವಿಂಬಲ್ಡನ್‌ಗೆ ಪೂರ್ವಭಾವಿಯಾಗಿ ನಡೆಯುವ ಬರ್ಮಿಂಗ್‌ಹ್ಯಾಮ್ ಕ್ಲಾಸಿಕ್ ಗ್ರಾಸ್‌ಕೋರ್ಟ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬ್ರಿಟನ್ ಲಾನ್ ಟೆನಿಸ್ ಸಂಸ್ಥೆ ಬುಧವಾರ ತಿಳಿಸಿದೆ.

2015ರಲ್ಲಿ ವಿಂಬಲ್ಡನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ ಬಳಿಕ ಮೊದಲ ಬಾರಿ ಶರಪೋವಾ ಜೂ.18 ರಿಂದ 24ರ ತನಕ ನಡೆಯಲಿರುವ ಗ್ರಾಸ್‌ಕೋರ್ಟ್ ಟೂರ್ನಮೆಂಟ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಶರಪೋವಾ 2004 ಹಾಗೂ 2005ರಲ್ಲಿ ಬರ್ಮಿಂಗ್‌ಹ್ಯಾಮ್ ಪ್ರಶಸ್ತಿ ಜಯಿಸಿದ್ದಾರೆ. ಕಳೆದ ವರ್ಷ ಈ ಟೂರ್ನಿಗೆ ವೈಲ್ಡ್‌ಕಾರ್ಡ್ ಪಡೆದಿದ್ದ ಶರಪೋವಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ದೂರ ಉಳಿದಿದ್ದರು.

ಕಳೆದ ವರ್ಷ ನಿಷೇಧದಿಂದ ಸಕ್ರಿಯ ಟೆನಿಸ್‌ಗೆ ವಾಪಸಾದ ಬಳಿಕ ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಶರಪೋವಾ ತನ್ನ ಮೊದಲಿನ ಲಯ ಕಂಡುಕೊಳ್ಳಲು ವಿಫಲರಾಗಿದ್ದಾರೆ.

ಕ್ಯಾಲಿಫೋರ್ನಿಯಾ ಟೆನಿಸ್ ಟೂರ್ನಿಯಲ್ಲಿ ಸೋಲುವುದರೊಂದಿಗೆ 2003ರ ಬಳಿಕ ಸತತ ಮೂರು ಪಂದ್ಯಗಳನ್ನು ಸೋತಿದ್ದರು. ರಶ್ಯದ ಆಟಗಾರ್ತಿ ಗಾಯದ ಸಮಸ್ಯೆಯಿಂದಾಗಿ ಮಿಯಾಮಿ ಓಪನ್‌ನಿಂದ ಹೊರಗುಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News