ಸಿರಿಯ ಪಡೆಗಳಿಂದ ಮತ್ತೆ ವಾಯು ದಾಳಿ

Update: 2018-04-20 17:28 GMT
ಸಾಂದರ್ಭಿಕ ಚಿತ್ರ

ಬೈರೂತ್, ಎ. 20: ಡಮಾಸ್ಕಸ್ ಸಮೀಪದಲ್ಲಿ ಸರಕಾರದ ನಿಯಂತ್ರಣವಿರದ ಕೊನೆಯ ಪಟ್ಟಣವೊಂದರ ಮೇಲೆ ಸಿರಿಯ ಸೇನೆ ಬುಧವಾರ ರಾತ್ರಿ ಬಾಂಬ್ ದಾಳಿ ನಡೆಸಿದೆ.

ಈ ಮೂಲಕ ನಿಯಂತ್ರಣ ತಪ್ಪಿರುವ ಪ್ರದೇಶಗಳನ್ನು ಮತ್ತೆ ನಿಯಂತ್ರಣಕ್ಕೆ ತರುವ ಕಾರ್ಯಾಚರಣೆಯನ್ನು ಸಿರಿಯ ಅಧ್ಯಕ್ಷ ಬಶರ್ ಅಲ್ ಅಸಾದ್ ತೀವ್ರಗೊಳಿಸಿದ್ದಾರೆ.

ಕಳೆದ ಶನಿವಾರ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ನಡೆಸಿರುವ ವಾಯು ದಾಳಿಯಿಂದ ಒಂದಷ್ಟೂ ವಿಚಲಿತಗೊಳ್ಳದ ಸಿರಿಯ ಪಡೆಗಳು ಬಂಡುಕೋರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News