×
Ad

ಐಪಿಎಲ್: ಆರ್‌ಸಿಬಿಗೆ ಜಯ

Update: 2018-04-21 23:43 IST

  ಬೆಂಗಳೂರು, ಎ.21:ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ನ 19ನೇ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿದೆ.

  ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 175ರನ್‌ಗಳ ಸವಾಲು ಪಡೆದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸಿತು.

ರಾಯಲ್ ಚಾಲೆಂಜರ್ಸ್‌ ತಂಡದ ಎಬಿಡಿ ವಿಲಿಯರ್ಸ್‌ ಔಟಾಗದೆ 90 (39ಎ, 10ಬೌ,5ಸಿ) ಮತ್ತು ವಿರಾಟ್ ಕೊಹ್ಲಿ 30 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಇದಕ್ಕೂ ಮೊದಲು ಡೆಲ್ಲಿ ಡೇರ್‌ಡೆವಿಲ್ಸ್ ತಂಡ 5 ವಿಕೆಟ್ ನಷ್ಟದಲ್ಲಿ 174 ರನ್ ಗಳಿಸಿತ್ತು. ರಿಷಬ್ ಪಂತ್ 85 ರನ್ (48ಎ, 6ಬೌ,7ಸಿ) ಮತ್ತು ಶ್ರೇಯಸ್ ಅಯ್ಯರ್ 52ರನ್(31ಎ, 4ಬೌ,3ಸಿ) ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News