ಐಪಿಎಲ್:ಡಿವಿಲಿಯರ್ಸ್ ಅಬ್ಬರ: ಬೆಂಗಳೂರು 205/8
ಬೆಂಗಳೂರು, ಎ.25: ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್(53) ಹಾಗೂ ಎಬಿಡಿವಿಲಿಯರ್ಸ್(68) ಅರ್ಧಶತಕಗಳ ಕೊಡುಗೆಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನ 24ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿದೆ.
ಇಲ್ಲಿನ ಬ್ಯಾಟಿಂಗ್ ಸ್ನೇಹಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಚೆನ್ನೈ ನಾಯಕ ಎಂಎಸ್ ಧೋನಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಆರ್‌ಸಿಬಿ 5ನೇ ಓವರ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ(18) ವಿಕೆಟ್‌ನ್ನು ಕಳೆದುಕೊಂಡಿತು. ಆಗ ಎರಡನೇ ವಿಕೆಟ್‌ಗೆ 103 ರನ್ ಸೇರಿಸಿದ ದಕ್ಷಿಣ ಆಫ್ರಿಕ ಆಟಗಾರರಾದ ಡಿಕಾಕ್(53,37 ಎಸೆತ, 1 ಬೌಂಡರಿ, 4 ಸಿಕ್ಸರ್) ಹಾಗೂ ಡಿವಿಲಿಯರ್ಸ್(68,30 ಎಸೆತ,2 ಬೌಂಡರಿ, 8 ಸಿಕ್ಸರ್)ತಂಡವನ್ನು ಆಧರಿಸಿದರು.
ಈ ಇಬ್ಬರು ಬೇರ್ಪಟ್ಟ ಬಳಿಕ ಮನ್‌ದೀಪ್ ಸಿಂಗ್(32) ಹಾಗೂ ಗ್ರಾಂಡ್‌ಹೋಮ್(11)5ನೇ ವಿಕೆಟ್‌ಗೆ 49 ರನ್ ಸೇರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಔಟಾಗದೆ 11 ರನ್ ಗಳಿಸಿದ ವಾಶಿಂಗ್ಟನ್ ಸುಂದರ್ ಚೆನ್ನೈಗೆ 206 ರನ್ ಗುರಿ ನಿಗದಿಪಡಿಸಿದರು.
ಚೆನ್ನೈ ಪರ ಶಾರ್ದೂಲ್ ಠಾಕೂರ್(2-46), ಇಮ್ರಾನ್ ತಾಹಿರ್(2-35) ಹಾಗೂ ಡ್ವೇಯ್ನಾ ಬ್ರಾವೊ(2-33) ತಲಾ ಎರಡು ವಿಕೆಟ್ ಪಡೆದಿದ್ದಾರೆ.