ಐಪಿಎಲ್ 2018: ಡೆಲ್ಲಿಗೆ 55 ರನ್‌ಗಳ ಜಯ
ಹೊಸದಿಲ್ಲಿ, ಎ.27: ಐಪಿಎಲ್ ಟ್ವೆಂಟಿ-20 ಟೂರ್ನಿಯ 26ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 55 ರನ್‌ಗಳ ಜಯ ಗಳಿಸಿದೆ.
ದಿಲ್ಲಿ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 220 ರನ್‌ಗಳ ಸವಾಲು ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 164ರನ್ ಗಳಿಸಿತು.
ಆ್ಯಂಡ್ರೆ ರಸೆಲ್ 44 ರನ್ , ಶುಬ್‌ಮನ್ ಗಿಲ್ 37 ರನ್, ಸುನೀಲ್ ನರೇನ್ 26 ರನ್, ದಿನೇಶ್ ಕಾರ್ತಿಕ್ 18 ರನ್, ಕ್ರಿಸ್ ಲಿನ್ 5 ರನ್, ರಾಬಿನ್ ಉತ್ತಪ್ಪ 1 ರನ್, ನಿತೀಶ್ ರಾಣಾ 8ರನ್, ಪಿಯೂಷ್ ಚಾವ್ಲಾ 2 ರನ್ , ಕುಲ್‌ದೀಪ್ ಯಾದವ್ ಔಟಾಗದೆ 7 ರನ್ ಮತ್ತು ಮಿಚೆಲ್ ಜಾನ್ಸನ್ ಔಟಾಗದೆ 12 ರನ್ ಗಳಿಸಿದರು.
ಡೆಲ್ಲಿ ತಂಡದ ಟ್ರೆಂಟ್ ಬೌಲ್ಟ್, ಗ್ಲೆನ್ ಮ್ಯಾಕ್ಸ್‌ವೆಲ್, ಅವೇಶ್ ಖಾನ್ ,ಅಮಿತ್ ಮಿಶ್ರಾ ತಲಾ 2 ವಿಕೆಟ್ ಹಂಚಿಕೊಂಡರು. ಇದರೊಂದಿಗೆ ನೂತನ ನಾಯಕ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ಮೊದಲ ಜಯ ಗಳಿಸಿದೆ.
ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 219 ರನ್ ಗಳಿಸಿತ್ತು.
ಡೆಲ್ಲಿ ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ ಔಟಾಗದೆ 93 ರನ್(40ಎ, 4ಬೌ,10ಸಿ), ಆರಂಭಿಕ ದಾಂಡಿಗ ಪೃಥ್ವಿ ಶಾ 62 ರನ್(44ಎ, 7ಬೌ,2 ಸಿ), ಕಾಲಿನ್ ಮುನ್ರೊ 33 ರನ್(18ಎ, 4ಬೌ,2ಸಿ) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 27 ರನ್(18ಎ, 1ಬೌ,2ಸಿ) ಗಳಿಸಿ ತಂಡದ ಮೊತ್ತವನ್ನು ಏರಿಸಿದರು.
ಕೋಲ್ಕತಾ ನೈಟ್ ರೈಡರ್ಸ್ ತಂಡ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿತ್ತು.