ಸನ್‌ರೈಸರ್ಸ್‌ಗೆ ರೋಚಕ ಜಯ
Update: 2018-04-29 19:35 IST
ಜೈಪುರ, ಎ.29: ಸನ್‌ರೈಸರ್ಸ್ ಹೈದರಾಬಾದ್ ತಂಡ ರವಿವಾರ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 28ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 11ರನ್‌ಗಳ ರೋಚಕ ಜಯ ಗಳಿಸಿದೆ.
ಗೆಲುವಿಗೆ 152 ರನ್‌ಗಳ ಸವಾಲು ಪಡೆದಿದ್ದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 140 ರನ್ ಗಳಿಸಿತು.
ಆರಂಭಿಕ ದಾಂಡಿಗ ಹಾಗೂ ನಾಯಕ ಅಜಿಂಕ್ಯ ರಹಾನೆ ಔಟಾಗದೆ 65 ರನ್(53ಎ, 5ಬೌ,1ಸಿ) ಮತ್ತು ಸಂಜು ಸ್ಯಾಮ್ಸನ್ 40ರನ್( 30ಎ, 3ಬೌ,1ಸಿ) ಗಳಿಸಿದರೂ ತಂಡ ಗೆಲುವಿನ ದಡ ಸೇರುವಲ್ಲಿ ಎಡವಿತು.
ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತ್ತು.