ರಾಯಲ್ ಚಾಲೆಂಜರ್ಸ್ 175/4
Update: 2018-04-29 21:51 IST
ಬೆಂಗಳೂರು, ಎ.29: ಐಪಿಎಲ್ ಟ್ವೆಂಟಿ-20 ಟೂರ್ನಿಯ 29ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 175 ರನ್ ಗಳಿಸಿದೆ.
ನಾಯಕ ವಿರಾಟ್ ಕೊಹ್ಲಿ ಔಟಾಗದೆ 68 ರನ್(44ಎ, 5ಬೌ,3ಸಿ), ವಿಕೆಟ್ ಕೀಪರ್ ಕ್ವಿಂಟನ್ ಡೆ ಕಾಕ್ 29ರನ್, ಬ್ರೆಂಡನ್ ಮೆಕಲಮ್ 38ರನ್, ಮನ್‌ದೀಪ್ ಸಿಂಗ್ 19ರನ್, ಕಾಲಿನ್ ಗ್ರಾಂಡ್‌ಹೊಮ್ಮೆ ಔಟಾಗದೆ 11 ರನ್ ಗಳಿಸಿದರು.
ಕೋಲ್ಕತಾ ತಂಡದ ಆ್ಯಂಡ್ರೆ ರಸೆಲ್ 31ಕ್ಕೆ 3 ವಿಕೆಟ್ ಮತ್ತು ಕುಲ್‌ದೀಪ್ ಯಾದವ್ 20ಕ್ಕೆ 1 ವಿಕೆಟ್ ಪಡೆದರು.
ಕೋಲ್ಕತಾ ನೈಟ್ ರೈಡರ್ಸ್ ತಂಡ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿತ್ತು.