ಇಸ್ರೇಲ್ ಸೈನಿಕರ ಗುಂಡಿಗೆ 3 ಫೆಲೆಸ್ತೀನೀಯರು ಬಲಿ

Update: 2018-04-30 17:33 GMT
ಸಾಂದರ್ಭಿಕ ಚಿತ್ರ

ಜೆರುಸಲೇಂ, ಎ. 30: ಗಾಝಾ ಪಟ್ಟಿಯೊಂದಿಗಿನ ಗಡಿ ಸಮೀಪ ಇಸ್ರೇಲ್ ಪಡೆಗಳು ರವಿವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಫೆಲೆಸ್ತೀನೀಯರನ್ನು ಗುಂಡು ಹಾರಿಸಿ ಕೊಂದಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

1948ರಲ್ಲಿ ಇಸ್ರೇಲ್ ಸ್ವಾತಂತ್ರ್ಯ ಘೋಷಿಸಿದ ಸಂದರ್ಭದಲ್ಲಿ ಅಲ್ಲಿಂದ ಬಲವಂತವಾಗಿ ಹೊರದಬ್ಬಲ್ಪಟ್ಟ ಫೆಲೆಸ್ತೀನೀಯರಿಗೆ ತಮ್ಮ ತಾಯ್ನೆಲಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಫೆಲೆಸ್ತೀನೀಯರು ಒಂದು ತಿಂಗಳಿನಿಂದ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಮಾರ್ಚ್ 30ರಂದು ಪ್ರತಿಭಟನೆ ಆರಂಭಗೊಂಡಂದಿನಿಂದ ಇಸ್ರೇಲ್ ಪಡೆಗಳ ಗುಂಡಿಗೆ 42 ಫೆಲೆಸ್ತೀನೀಯರು ಬಲಿಯಾಗಿದ್ದಾರೆ ಹಾಗೂ 2,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News