ಪ್ರಜ್ಞೇಶ್ ಗುಣೇಶ್ವರನ್ ಜೀವನಶ್ರೇಷ್ಠ ಸಾಧನೆ

Update: 2018-04-30 18:49 GMT

ಹೊಸದಿಲ್ಲಿ, ಎ.30: ಎಟಿಪಿ ಚಾಲೆಂಜರ್ ಸರ್ಕ್ಯೂಟ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿರುವ ಭಾರತದ ಪ್ರಜ್ಞೇಶ್ ಗುಣೇಶ್ವರನ್ 84 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 176ನೇ ಸ್ಥಾನ ತಲುಪಿದ್ದಾರೆ.

ಚೀನಾದಲ್ಲಿ ರವಿವಾರ ನಡೆದ ಎಟಿಪಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿರುವ ಪ್ರಜ್ಞೇಶ್ 125 ಅಂಕವನ್ನು ಗಳಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ ಮೊದಲ ಬಾರಿ ಅಗ್ರ-200ರಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತದ ಪರ ಅಗ್ರ ರ್ಯಾಂಕ್(85) ಕಾಯ್ದುಕೊಂಡಿರುವ ಯೂಕಿ ಭಾಂಬ್ರಿ ಎರಡು ಸ್ಥಾನ ಕಳೆದುಕೊಂಡಿದ್ದಾರೆ. ರಾಮ್‌ಕುಮಾರ್ ರಾಮನಾಥನ್(120) ಆ ನಂತರದ ಸ್ಥಾನದಲ್ಲಿದ್ದಾರೆ.

ಸುಮಿತ್ ನಗಾಲ್(225)ಅರ್ಜುನ್ ಖಡೆ(397) ಹಾಗೂ ಶಶಿ ಕುಮಾರ್ ಮುಕುಂದ್(418) ರ್ಯಾಂಕಿಂಗ್‌ನಲ್ಲಿರುವ ಭಾರತದ ಇತರ ಆಟಗಾರರಾಗಿದ್ದಾರೆ.ಚ್ಟ ಡಿಡಿಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ 23ನೇ ಸ್ಥಾನ ಕಳೆದುಕೊಂಡಿದ್ದಾರೆ. ಡಿವಿಜ್ ಶರಣ್ 2 ಸ್ಥಾನ ಕಳೆದುಕೊಂಡು 43ನೇ ಸ್ಥಾನ ಪಡೆದಿದ್ದಾರೆ. ಲಿಯಾಂಡರ್ ಪೇಸ್ ಎರಡು ಸ್ಥಾನ ಹಿಂಭಡ್ತಿ ಪಡೆದು 50ನೇ ಸ್ಥಾನದಲ್ಲಿದ್ದಾರೆ.ಚ್ಟ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ ಎರಡು ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 193ನೇ ರ್ಯಾಂಕಿಗೆ ಭಡ್ತಿ ಪಡೆದಿದ್ದಾರೆ. ಕರ್ಮನ್ ಕೌರ್ ಥಂಡಿ(267) ಆ ಬಳಿಕದ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News