ಹಂಗೇರಿ ಓಪನ್: ಮಾರ್ಕೊ ಸೆಕ್ಚಿನಾಚೊ ಚಾಂಪಿಯನ್
Update: 2018-05-01 00:27 IST
ಹಂಗೇರಿ, ಎ.30: ಇಟಲಿಯ ಮಾರ್ಕೊ ಸೆಕ್ಚಿನಾಚೊ ಹಂಗೇರಿ ಓಪನ್ ಫೈನಲ್‌ನಲ್ಲಿ ಜಯ ಸಾಧಿಸುವುದರೊಂದಿಗೆ ಚೊಚ್ಚಲ ಎಟಿಪಿ ಟೂರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ರವಿವಾರ ಒಂದು ಗಂಟೆ, 47 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಮಾರ್ಕೊ ಅವರು ಆಸ್ಟ್ರೇಲಿಯದ ಜಾನ್ ಮಿಲ್ಮಾನ್‌ರನ್ನು 7-5, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ‘‘ಹಂಗೇರಿ ಓಪನ್ ಟೂರ್ನಮೆಂಟ್ ಜಯಿಸಿರುವುದು ನನ್ನ ಪಾಲಿಗೆ ಅಪೂರ್ವ ಸಾಧನೆ. ಇಂದು ನನಗೆ ವಿಶೇಷ ದಿನ.ಏಕೆಂದರೆ ನಾನು ವೃತ್ತಿಜೀವನದಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿದ್ದೇನೆ. ಹೀಗಾಗಿ ನನಗೆ ಅತೀವ ಆನಂದವಾಗಿದೆ’’ ಎಂದು ಮಾರ್ಕೊ ಹೇಳಿದ್ದಾರೆ.