ಪರಾಗ್ವೆ ಓಪನ್‌ನಿಂದ ಹಿಂದೆ ಸರಿದ ಪ್ಲಿಸ್ಕೋವಾ

Update: 2018-04-30 18:59 GMT

ಹೊಸದಿಲ್ಲಿ, ಎ.30: ಝೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಈ ವಾರ ನಡೆಯಲಿರುವ ಪರಾಗ್ವೆ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

 ಪ್ಲಿಸ್ಕೋವಾ ಬದಲಿಗೆ ಅಲಿಯಸಾಂಡ್ರಾ ಸಾಸ್ನೊವಿಚ್ ಆಡಲಿದ್ದಾರೆ. ಪರಾಗ್ವೆ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿಯಾಗಿದ್ದ ಪ್ಲಿಸ್ಕೋವಾ ಮಂಗಳವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಸಹೋದರಿ ಕ್ರಿಸ್ಟಿನಾ ಪ್ಲಿಸ್ಕೋವಾರನ್ನು ಎದುರಿಸಬೇಕಾಗಿತ್ತು. ‘‘ಕರೋಲಿನಾ ಪ್ಲಿಸ್ಕೋವಾ ಪರಾಗ್ವೆ ಟೂರ್ನಿಯಿಂದ ಹಿಂದೆ ಸರಿಯಲಿದ್ದಾರೆ....ಸಾಸ್ನೊವಿಚ್ ಅವರು ಪ್ಲಿಸ್ಕೋವಾರಿಂದ ತೆರವಾದ ಸ್ಥಾನ ತುಂಬಲಿದ್ದಾರೆ. ಸಾಸ್ನೊವಿಚ್ ಅವರು ಕ್ರಿಸ್ಟಿನಾ ಪ್ಲಿಸ್ಕೋವಾರನ್ನು ಎದುರಿಸಲಿದ್ದಾರೆ’’ ಎಂದು ಮಹಿಳಾ ಟೆನಿಸ್ ಸಂಸ್ಥೆ(ಡಬ್ಲುಟಿಎ) ಟ್ವಿಟರ್‌ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News