ರಾಯಲ್ ಚಾಲೆಂಜರ್ಸ್ ಬೆಂಗಳೂರು 167/7
Update: 2018-05-01 22:06 IST
ಬೆಂಗಳೂರು, ಮೇ 1: ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ಟ್ವೆಂಟಿ-20 ಟೂರ್ನಿಯ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿ ತಂಡದ ಆರಂಭಿಕ ದಾಂಡಿಗ ಮನನ್ ವೋರಾ 45 ರನ್, ಬ್ರೆಂಡನ್ ಮೆಕಲಮ್ 37ರನ್, ನಾಯಕ ವಿರಾಟ್ ಕೊಹ್ಲಿ 32 ರನ್, ಮನ್ ದೀಪ್ ಸಿಂಗ್ 14 ರನ್, ಕಾಲಿನ್ ಗ್ರ್ಯಾಂಡ್ ಹೊಮ್ಮೆ ಔಟಾಗದೆ 23 ರನ್, ಕ್ವಿಂಟನ್ ಡೆ ಕಾಕ್ 7 ರನ್, ವಾಶಿಂಗ್ಟನ್ ಸುಂದರ್ 1ರನ್, ಟಿಮ್ ಸೌಥಿ 1 ರನ್, ಉಮೇಶ್ ಯಾದವ್ ಔಟಾಗದೆ 1 ರನ್ ಗಳಿಸಿದರು.
ಮುಂಬೈ ತಂಡದ ಹಾರ್ದಿಕ್ ಪಾಂಡ್ಯ 28ಕ್ಕೆ 3, ಮೆಕ್ಲೀನಘನ್ , ಜಸ್ ಪ್ರೀತ್ ಬುಮ್ರಾ, ಮಾರ್ಕೆಂಡ್ ತಲಾ 1 ವಿಕೆಟ್ ಪಡೆದರು.