×
Ad

ಲಿವರ್‌ಪೂಲ್ ಫೈನಲ್‌ಗೆ ಪ್ರವೇಶ

Update: 2018-05-03 23:49 IST

ರೋಮ್, ಮೇ 3: ರೋಮಾ ತಂಡದ ವಿರುದ್ಧ ಸೆಮಿ ಫೈನಲ್‌ನಲ್ಲಿ 2-4 ಗೋಲುಗಳ ಅಂತರದಿಂದ ಸೋತ ಹೊರತಾಗಿಯೂ ಲಿವರ್‌ಪೂಲ್ ತಂಡ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

7-6 ಗೋಲು ಸರಾಸರಿಯಲ್ಲಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿರುವ ಐದು ಬಾರಿಯ ಯುರೋಪಿಯನ್ ಚಾಂಪಿಯನ್ ಲಿವರ್‌ಪೂಲ್ ಮೇ 26 ರಂದು ನಡೆಯಲಿರುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ರಿಯಲ್ ಮ್ಯಾಡ್ರಿಡ್ ತಂಡವನ್ನು ಎದುರಿಸಲಿದೆ. ರೋಮಾ ಪರ ರಾಡ್ಜಾ ನೈಂಗೋಲನ್(86,90+4) ಅವಳಿ ಗೋಲು ಬಾರಿಸಿದರು. ಜೇಮ್ಸ್ ಮಿಲ್ನರ್(15), ಎಡಿನ್ ಝಿಕೊ (52) ತಲಾ ಒಂದು ಗೋಲು ಬಾರಿಸಿದರು. ಲಿವರ್‌ಪೂಲ್ ಪರ ಸಾಡಿಯೊ ಮಾನ್(9) ಹಾಗೂ ಜಾರ್ಜಿನೊ(25ನೇ ನಿಮಿಷ)ತಲಾ ಒಂದು ಗೋಲು ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News