ಲೈಂಗಿಕ ಪೀಡನೆ : ಬ್ರೆಝಿಲ್ ಜಿಮ್ನಾಸ್ಟಿಕ್ ಕೋಚ್ ವಿರುದ್ಧ ಆರೋಪ
Update: 2018-05-04 23:25 IST
ರಿಯೊ ಡಿ ಜನೈರೊ, ಮೇ 4: ತರಬೇತಿ ಸಂದರ್ಭ ಹನ್ನೆರಡ್ಕಕೂ ಹೆಚ್ಚು ಬಾಲಕರಿಗೆ ಲೈಂಗಿಕ ಪೀಡನೆ ನೀಡಿರುವ ಆರೋಪ ಎದುರಿಸುತ್ತಿರುವ ಬ್ರೆಝಿಲ್‌ನ ರಾಷ್ಟ್ರೀಯ ಜಿಮ್ನಾಸ್ಟಿಕ್ ತಂಡದ ಮಾಜಿ ಕೋಚ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಜಿಮ್ನಾಸ್ಟಿಕ್‌ನ ಫ್ಲೋರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್ ಗೆದ್ದಿರುವ ಹಾಗೂ ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ವಿಜೇತ ಡಿಯೆಗೊ ಹಿಪೊಲಿಟೋರಿಗೆ ತರಬೇತಿ ನೀಡಿದ್ದ ಫೆರ್ನಾಂಡೊ ಡಿ ಕರ್ವಾಲೋ ಲೋಪ್ಸ್ ಕಳೆದ ಎರಡು ದಶಕಗಳಿಂದ ಸಾವೊಪಾಲೊದಲ್ಲಿ ತರಬೇತಿ ಶಿಬಿರ ನಡೆಸುತ್ತಿದ್ದು ಈ ವೇಳೆ ಹನ್ನೆರಡಕ್ಕೂ ಹೆಚ್ಚು ಬಾಲಕರಿಗೆ ಲೈಂಗಿಕ ಪೀಡನೆ ನೀಡಿರುವುದಾಗಿ ಬ್ರೆಝಿಲ್‌ನ ‘ಟಿವಿ ಗ್ಲೋಬೊ’ ವರದಿ ಪ್ರಸಾರ ಮಾಡಿದೆ. ಆದರೆ ತನ್ನ ಮೇಲಿನ ಆರೋಪವನ್ನು ಲೋಪ್ಸ್ ನಿರಾಕರಿಸಿದ್ದಾರೆ.