ಸನ್ ರೈಸರ್ಸ್‌ಗೆ ಜಯ
ಹೈದರಾಬಾದ್, ಮೇ 5: ಐಪಿಎಲ್ ಟ್ವೆಂಟಿ-20 ಟೂರ್ನಿಯ 36ನೇ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್‌ಗಳ ಜಯ ಗಳಿಸಿದೆ.
ಗೆಲುವಿಗೆ 164 ರನ್‌ಗಳ ಸವಾಲು ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡ ಇನ್ನೂ 1 ಎಸೆತ ಬಾಕಿ ಉಳಿಸಿ 3 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿತು.
ನಾಯಕ ಕೇನ್ ವಿಲಿಯಮ್ಸನ್ ಔಟಾಗದೆ 32 ರನ್ ಮತ್ತು ಯೂಸುಫ್ ಪಠಾಣ್ ಔಟಾಗದೆ 27 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರಂಭಿಕ ದಾಂಡಿಗರಾದ ಅಲೆಕ್ಸ್ ಹೇಲ್ಸ್ 45 ರನ್, ಶಿಖರ್ ಧವನ್ 33ರನ್, ಮನೀಷ್ ಪಾಂಡೆ 21ರನ್ ಗಳಿಸಿದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 163 ರನ್ ಗಳಿಸಿತ್ತು.
ಆರಂಭಿಕ ದಾಂಡಿಗ ಪೃಥ್ವಿ ಶಾ 65 ರನ್(36ಎ, 6ಬೌ,3ಸಿ), ನಾಯಕ ಶ್ರೇಯಸ್ ಅಯ್ಯರ್ 44 ರನ್(36ಎ, 3ಬೌ,2ಸಿ), ರಿಷಭ್ ಪಂತ್ 18 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 2ರನ್, ನಮನ್ ಓಜಾ 1ರನ್, ವಿಜಯ್ ಶಂಕರ್ ಔಟಾಗದೆ 23ರನ್, ಡೇನಿಯಲ್ ಕ್ರಿಶ್ಟಿಯನ್ ಔಟಾಗದೆ 7ರನ್ ಗಳಿಸಿದರು.