ರಿಷಬ್ ಪಂತ್ ಶತಕ: ಡೆಲ್ಲಿ ಡೇರ್ ಡೆವಿಲ್ಸ್ 187/5
ಹೊಸದಿಲ್ಲಿ, ಮೇ 10: ಐಪಿಎಲ್‌ನ 42ನೇ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ತಂಡ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ದಾಖಲಿಸಿದ ಶತಕದ(ಔಟಾಗದೆ 128)ಸಹಾಯದಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 187 ರನ್ ಕಲೆ ಹಾಕಿತು.
ಟಾಸ್ ಜಯಿಸಿದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. 7.4 ಓವರ್‌ಗಳಲ್ಲಿ 43 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿಯ ಆರಂಭ ಕಳಪೆಯಾಗಿತ್ತು.
ಆಗ ತಂಡಕ್ಕೆ ಆಸರೆಯಾದ ಪಂತ್(ಔಟಾಗದೆ 128, 63 ಎಸೆತ, 15 ಬೌಂಡರಿ,7 ಸಿಕ್ಸರ್) ಏಕಾಂಗಿ ಹೋರಾಟ ನೀಡಿ ತಂಡ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಲು ನೆರವಾದರು. 4ನೇ ವಿಕೆಟ್‌ಗೆ ಹರ್ಷಲ್ ಪಟೇಲ್(24) ಅವರೊಂದಿಗೆ 55 ರನ್ ಜೊತೆಯಾಟ ನಡೆಸಿದ ಪಂತ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್‌ರೊಂದಿಗೆ 5ನೇ ವಿಕೆಟ್‌ಗೆ 65 ರನ್ ಸೇರಿಸಿ ತಂಡದ ಸ್ಕೋರ್ ಹಿಗ್ಗಿಸಲು ನೆರವಾದರು.
ಹೈದರಾಬಾದ್ ಪರ ಶಾಕಿಬ್ ಅಲ್ ಹಸನ್ (2-27)ಯಶಸ್ವಿ ಬೌಲರ್ ಎನಿಸಿಕೊಂಡರು