ಫಿಲಿಪ್ಪೀನ್ಸ್: ಮುಖ್ಯ ನ್ಯಾಯಾಧೀಶೆಯ ವಜಾ

Update: 2018-05-11 15:52 GMT

ಮನಿಲಾ (ಫಿಲಿಪ್ಪೀನ್ಸ್), ಮೇ 11: ಫಿಲಿಪ್ಪೀನ್ಸ್ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶೆ ಮರಿಯಾ ಲೂರ್ಡ್ಸ್ ಸೆರೀನೋ ಅವರನ್ನು ಇತರ ನ್ಯಾಯಾಧೀಶರು ಶುಕ್ರವಾರ ಉಚ್ಚಾಟಿಸಿದ್ದಾರೆ.

ಸರಕಾರ ಸಲ್ಲಿಸಿದ ಮನವಿಯಂತೆ, ನ್ಯಾಯಾಧೀಶೆಯ ಉಚ್ಚಾಟನೆ ಬಗ್ಗೆ ನಿರ್ಧರಿಸಲು ಮತದಾನ ಏರ್ಪಡಿಸಲಾಗಿತ್ತು.

ಕಾನೂನು ಪ್ರಕಾರ ತನ್ನ ಆಸ್ತಿ ಘೋಷಿಸಲು ವಿಫಲರಾದ ನ್ಯಾಯಾಧೀಶೆ ಸೆರೀನೋ ಅವರನ್ನು ವಜಾಗೊಳಿಸುವ ಪರವಾಗಿ 14 ನ್ಯಾಯಾಧೀಶರ ಪೈಕಿ 8 ನ್ಯಾಯಾಧೀಶರು ಮತ ಹಾಕಿದ್ದಾರೆ ಎಂದು ನ್ಯಾಯಾಲಯದ ವಕ್ತಾರ ತಿಯೋಡರ್ ಟೆ ಹೇಳಿದ್ದಾರೆ.

ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ ಹಾಗೂ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ.

ತನ್ನ ಉಚ್ಚಾಟನೆ ಅಸಾಂವಿಧಾನಿಕ ಎಂಬುದಾಗಿ ಅವರು ಬಣ್ಣಿಸಿದ್ದಾರೆ.

ಮುಖ್ಯ ನ್ಯಾಯಾಧೀಶೆಯನ್ನು ವಜಾಗೊಳಿಸಿರುವುದನ್ನು ಪ್ರತಿಭಟಿಸಿ ನೂರಾರು ಮಂದಿ ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News