ತಾಪಮಾನ ಅನಿಲಗಳ ಮೇಲೆ ನಿಗಾ ಇಡುವ ನಾಸಾ ಕಾರ್ಯಕ್ರಮಕ್ಕೆ ಖೊಕ್

Update: 2018-05-11 15:58 GMT

ವಾಶಿಂಗ್ಟನ್, ಮೇ 11: ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಪ್ರಮುಖ ಅನಿಲಗಳಾದ ಇಂಗಾಲದ ಡೈ ಆಕ್ಸೈಡ್ ಮತ್ತು ಮೀಥೇನ್ ಮೇಲೆ ನಿಗಾ ಇಡುವ ನಾಸಾದ ಕಾರ್ಯಕ್ರಮವೊಂದನ್ನು ಅಮೆರಿಕದ ಅಧ್ಯಕ್ಷರು ಸದ್ದಿಲ್ಲದೆ ನಿಲ್ಲಿಸಿದ್ದಾರೆ ಎಂದು ‘ಸಯನ್ಸ್’ ಜರ್ನಲ್ ಹೇಳಿದೆ.

ಈ ಕಾರ್ಯಕ್ರಮ ನಿರ್ವಹಣೆಗೆ ವರ್ಷಕ್ಕೆ 10 ಮಿಲಿಯ ಡಾಲರ್ (ಸುಮಾರು 67 ಕೋಟಿ ರೂಪಾಯಿ) ಖರ್ಚಾಗುತ್ತಿತ್ತು.

ನಾಸಾದ ಕಾರ್ಬನ್ ಮೋನಿಟರಿಂಗ್ ಸಿಸ್ಟಮ್ (ಸಿಎಮ್‌ಎಸ್) ಇಂಗಾಲದ ಮೂಲಗಳನ್ನು ಪತ್ತೆಹಚ್ಚುತ್ತಿತ್ತು ಹಾಗೂ ಭೂಮಿಯ ಇಂಗಾಲ ಹರಿವಿನ ಉತ್ಕೃಷ್ಟ ದರ್ಜೆಯ ಮಾದರಿಗಳನ್ನು ತಯಾರಿಸುತ್ತಿತ್ತು ಎಂದು ವರದಿ ಹೇಳಿದೆ.

‘‘ಈಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಡಳಿತ ಸಿಎಮ್‌ಎಸ್ ಕಾರ್ಯಕ್ರಮವನ್ನು ಸದ್ದಿಲ್ಲದೆ ನಿಲ್ಲಿಸಿದೆ’’ ಎಂದು ಪತ್ರಿಕೆ ಹೇಳಿದೆ.

ಶ್ವೇತಭವನದ ಈ ಕ್ರಮವು ‘‘ಹವಾಮಾನ ವಿಜ್ಞಾನದ ಮೇಲಿನ ಹೊಸ ದಾಳಿಯಾಗಿದೆ’’ ಎಂದು ಅದು ಬಣ್ಣಿಸಿದೆ.

‘ಅನುದಾನ ಕೊರತೆ ಮತ್ತು ವಿಜ್ಞಾನ ಬಜೆಟ್‌ನ ಹೆಚ್ಚಿನ ಆದ್ಯತೆ’ಗಳನ್ನು ಹೊರತುಪಡಿಸಿ, ಬೇರೆ ಕಾರಣವೊಂದನ್ನು ನಾಸಾ ನೀಡಿಲ್ಲ ಎಂದು ಪತ್ರಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News