ಅಮೆರಿಕ ರಾಜತಾಂತ್ರಿಕರ ಚಲನವಲನ ಮೇಲೆ ಪಾಕ್ ನಿರ್ಬಂಧ

Update: 2018-05-11 17:04 GMT

ಇಸ್ಲಾಮಾಬಾದ್, ಮೇ 11: ಅಮೆರಿಕದ ರಾಜತಾಂತ್ರಿಕರ ಚಲನವಲನಗಳ ಮೇಲೆ ಪಾಕಿಸ್ತಾನ ಶುಕ್ರವಾರ ನಿರ್ಬಂಧ ವಿಧಿಸಿದೆ. ಇಂಥದೇ ನಿರ್ಬಂಧಗಳನ್ನು ಅಮೆರಿಕ ಪಾಕಿಸ್ತಾನದ ರಾಜತಾಂತ್ರಿಕರ ಮೇಲೆ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ಈ ಮುಯ್ಯಿಗೆ ಮುಯ್ಯಿ ಕ್ರಮವು ಈಗಾಗಲೇ ಹಳಸಿರುವ ಉಭಯ ದೇಶಗಳ ಸಂಬಂಧದ ಮೇಲೆ ಇನ್ನಷ್ಟು ಒತ್ತಡ ಹೇರಲಿದೆ.

ಈ ಕ್ರಮವು ಮೇ 1ರಂದೇ ಜಾರಿಗೆ ಬರಬೇಕಾಗಿತ್ತು. ಆದರೆ, ವಿವಾದವನ್ನು ಪರಿಹರಿಸಲು ಉಭಯ ದೇಶಗಳು ನಿರ್ಧರಿಸಿದ್ದರಿಂದ, ಜಾರಿ ವಿಳಂಬವಾಗಿತ್ತು.

ಪರಸ್ಪರರ ರಾಜತಾಂತ್ರಿಕರ ಚಲನವಲನಗಳ ಮೇಲೆ ನಿರ್ಬಂಧ ವಿಧಿಸಲು ಉಭಯ ದೇಶಗಳು ನಿರ್ಧರಿಸಿವೆ ಎಂದು ಪಾಕಿಸ್ತಾನ ವಿದೇಶ ಕಚೇರಿಯ ವಕ್ತಾರ ಡಾ. ಮುಹಮ್ಮದ್ ಫೈಝಲ್ ಗುರುವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News