×
Ad

ಇಂಡೋನೇಶ್ಯ: ಜ್ವಾಲಾಮುಖಿ ಸ್ಫೋಟ

Update: 2018-05-11 22:37 IST

ಜಕಾರ್ತ (ಇಂಡೋನೇಶ್ಯ), ಮೇ 11: ಇಂಡೋನೇಶ್ಯದ ಮೌಂಟ್ ಮೆರಪಿ ಜ್ವಾಲಾಮುಖಿಯಿಂದ ಹೊಗೆ ಮತ್ತು ಬೂದಿ ಆಕಾಶಕ್ಕೆ ಚಿಮ್ಮಲು ಆರಂಭಿಸಿದ ಬಳಿಕ, ಅದರ ಸಮೀಪ ವಾಸಿಸುತ್ತಿರುವ ಜನರನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಜನ ದಟ್ಟಣೆಯ ಜಾವಾ ದ್ವೀಪದಲ್ಲಿರುವ ಜ್ವಾಲಾಮುಖಿಯು ಇಂಡೋನೇಶ್ಯದ ಅತ್ಯಂತ ಸಕ್ರಿಯ ಜ್ವಾಲಾಮುಖಿಯಾಗಿದೆ. 2010ರಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು 350ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಪರ್ವತದ 5 ಕಿಲೋಮೀಟರ್ ತ್ರಿಜ್ಯದಲ್ಲಿ ವಾಸಿಸುತ್ತಿರುವ ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ವಿಪತ್ತು ನಿರ್ವಹಣೆ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

ಜ್ವಾಲಾಮುಖಿ ಸಮೀಪದ ದೊಡ್ಡ ನಗರ ಯೋಗ್ಯಕರ್ತದಲ್ಲಿರುವ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News