×
Ad

ರಾಯಲ್ ಚಾಲೆಂಜರ್ಸ್‌ಗೆ ಜಯ

Update: 2018-05-12 23:47 IST
ಪಂದ್ಯಶ್ರೇಷ್ಠ :ಎಬಿಡಿ ವಿಲಿಯರ್ಸ್‌ 72 ರನ್(37ಎ, 4ಬೌ,6ಸಿ) 

 ಹೊಸದಿಲ್ಲಿ, ಮೇ 12: ಐಪಿಎಲ್ ಟ್ವೆಂಟಿ-20 ಟೂರ್ನಿಯ 45ನೇ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ 5 ವಿಕೆಟ್‌ಗಳ ಜಯ ಗಳಿಸಿದೆ.
ಇಲ್ಲಿನ ಫಿರೋಝ್ ಶಾ ಕೊಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 182 ರನ್ ಮಾಡಬೇಕಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇನ್ನೂ 1 ಓವರ್ ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿತು.
ನಾಯಕ ವಿರಾಟ್ ಕೊಹ್ಲಿ 70 ರನ್(40ಎ, 7ಬೌ,3ಸಿ) , ಎಬಿಡಿ ವಿಲಿಯರ್ಸ್‌ 72 ರನ್(37ಎ, 4ಬೌ,6ಸಿ), ಸರ್ಫರಾಝ್ ಖಾನ್ 11 ರನ್ ಮತ್ತು ಮನ್‌ದೀಪ್ ಸಿಂಗ್ 13ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
  ಡೆಲ್ಲಿ ಡೇರ್‌ಡೆವಿಲ್ಸ್ 181/4: ಡೆಲ್ಲಿ ಡೇರ್‌ಡೆವಿಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 181 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ತಂಡ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅರ್ಧಶತಕ (61) ಮತ್ತು ಅಭಿಷೇಕ್ ಶರ್ಮಾ ಅವರ ಉಪಯುಕ್ತ 46 ರನ್‌ಗಳ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.ಚಾಹಲ್ ದಾಳಿಗೆ ಸಿಲುಕಿ ಆರಂಭಿಕ ದಾಂಡಿಗರಾದ ಪೃಥ್ವಿ ಶಾ (2) ಮತ್ತು ಜೇಸನ್ ರಾಯ್ (12) ಅವರನ್ನು ಬೇಗನೆ ಕಳೆದುಕೊಂಡಿತ್ತು. ನಾಯಕ ಶ್ರೇಯಸ್ ಅಯ್ಯರ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಮೂರನೇ ವಿಕೆಟ್‌ಗೆ ಜೊತೆಯಾಟದಲ್ಲಿ 93 ರನ್ ಸೇರಿಸಿದರು. ಪಂತ್ 61 ರನ್(34ಎ, 5ಬೌ,4ಸಿ) ಗಳಿಸಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಅಯ್ಯರ್ 32 ರನ್ ಗಳಿಸಿ ನಿರ್ಗಮಿಸಿದರು. 5ನೇ ವಿಕೆಟ್‌ಗೆ ವಿ.ಶಂಕರ್ ಮತ್ತು ಅಭಿಷೇಕ್ ಶರ್ಮಾ ಮುರಿಯದ ಜೊತೆಯಾಟದಲ್ಲಿ 61 ರನ್ ಸೇರಿಸಿದರು.

ಶಂಕರ್ ಔಟಾಗದೆ 21 ರನ್(20ಎ, 2ಬೌ) ಮತ್ತು ಅಭಿಷೇಕ್ ಶರ್ಮಾ ಔಟಾಗದೆ 46 ರನ್(19, 3ಬೌ,4ಸಿ) ಗಳಿಸಿದರು.
ಚಹಾಲ್ 28ಕ್ಕೆ 2 ವಿಕೆಟ್, ಎಂ.ಎಂ.ಅಲಿ ಮತ್ತು ಮುಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News