ಅಫ್ಘಾನ್ ನಲ್ಲಿ ಸರಕಾರಿ ಕಟ್ಟಡಕ್ಕೆ ಉಗ್ರರ ದಾಳಿ: 9 ಸಾವು, ಹಲವಾರು ಮಂದಿಗೆ ಗಾಯ

Update: 2018-05-13 17:11 GMT

ಅಫ್ಘಾನ್: ಜಲಾಲಾಬಾದ್ (ಅಫ್ಘಾನಿಸ್ತಾನ), ಮೇ 13: ಅಫ್ಘಾನಿಸ್ತಾನದ ಪೂರ್ವದ ನಗರ ಜಲಾಲಾಬಾದ್‌ನಲ್ಲಿರುವ ಸರಕಾರಿ ಕಟ್ಟಡವೊಂದರ ಮೇಲೆ ರವಿವಾರ ದಾಳಿ ನಡೆಸಿದ ಭಯೋತ್ಪಾದಕರು ಕನಿಷ್ಠ ಒಂಬತ್ತು ಮಂದಿಯನ್ನು ಕೊಂದಿದ್ದಾರೆ ಹಾಗೂ ಹತ್ತಾರು ಮಂದಿಯನ್ನು ಗಾಯಗೊಳಿಸಿದ್ದಾರೆ.

 ಸರಕಾರಿ ಲೆಕ್ಕಪತ್ರ ಕಟ್ಟಡದ ದ್ವಾರದಲ್ಲಿ ಬಾಂಬ್ ಸ್ಫೋಟ ನಡೆಸಿದ ನಾಲ್ವರು ಉಗ್ರರು, ಮಶೀನ್ ಗನ್‌ಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್‌ಗಳನ್ನು ಹಿಡಿದುಕೊಂಡು ಕಟ್ಟಡದೊಳಕ್ಕೆ ಧಾವಿಸಿದರು ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಎದುರಾದ ಭದ್ರತಾ ಸಿಬ್ಬಂದಿ ವಿರುದ್ಧ ಉಗ್ರರು ಗಂಟೆಗಟ್ಟಳೆ ಹೋರಾಟ ನಡೆಸಿದರು.

ದಾಳಿಗೊಳಗಾದ ಕಟ್ಟಡದ ಸಮೀಪ ಹಲವಾರು ಸರಕಾರಿ ಕಟ್ಟಡಗಳು ಮತ್ತು ಒಂದು ಶಾಲೆ ಇತ್ತು. ಲೆಕ್ಕಪತ್ರ ಕಟ್ಟಡದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಹೋರಾಟ ನಡೆಯುತ್ತಿರುವಂತೆಯೇ, ಶಾಲೆಯಲ್ಲಿದ್ದ ಸುಮಾರು 1,000 ಬಾಲಕಿಯರು ಸಿಕ್ಕಿಹಾಕಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News