×
Ad

ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಅಮೆರಿಕ ವಾಪಸ್

Update: 2018-05-13 23:10 IST

ಪ್ಯಾರಿಸ್, ಮೇ 13: ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದಕ್ಕೆ ಸರಿದ ಬಳಿಕ, ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಉದ್ವಿಗ್ನತೆಯ ಬಗ್ಗೆ ತನಗೆ ಕಳವಳ ಉಂಟಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೇಳಿದ್ದಾರೆ.

ಫ್ರಾನ್ಸ್ ಅಧ್ಯಕ್ಷರು ಶನಿವಾರ ದೂರವಾಣಿ ಕರೆ ಮಾಡಿ, ತನ್ನ ಅತೃಪ್ತಿಯನ್ನು ಟ್ರಂಪ್‌ರಿಗೆ ತಿಳಿಯಪಡಿಸಿದರು ಎಂದು ಮ್ಯಾಕ್ರೋನ್‌ರ ಕಚೇರಿ ತಿಳಿಸಿದೆ.

ಇರಾನ್‌ನ ಪರಮಾಣು ಚಟುವಟಿಕೆಗಳನ್ನು ಹತ್ತಿಕ್ಕಲು ಆ ದೇಶದೊಂದಿಗೆ ಪಾಶ್ಚಿಮಾತ್ಯ ದೇಶಗಳು ಮಾಡಿಕೊಂಡಿರುವ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದನ್ನು ಮ್ಯಾಕ್ರೋನ್ ಬಲವಾಗಿ ವಿರೋಧಿಸಿದ್ದಾರೆ.

ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮರ ನೇತೃತ್ವದಲ್ಲಿ, 2015ರಲ್ಲಿ ಅಮೆರಿಕ, ಫ್ರಾನ್ಸ್, ಬ್ರಿಟನ್, ಜರ್ಮನಿ, ಚೀನಾ ಮತ್ತು ರಶ್ಯಗಳು ಇರಾನ್‌ನೊಂದಿಗಿನ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದವು.

ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಮತ್ತು ಇರಾನ್‌ಗಳ ನಡುವೆ ವೈರತ್ವ ಹೆಚ್ಚಿರುವುದನ್ನು ಗಮನಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News