ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿದ ಹಿಂದೂಜಾ
Update: 2018-05-13 23:17 IST
ಲಂಡನ್, ಮೇ 13: ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಅಗ್ರ ಸ್ಥಾನದಲ್ಲಿದ್ದ ಹಿಂದೂಜಾ ಸಹೋದರರು, ಈ ಬಾರಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಮೊದಲನೇ ಸ್ಥಾನವನ್ನು ರಾಸಾಯನಿಕ ಕಂಪೆನಿಯೊಂದರ ಒಡೆಯ ಜಿಮ್ ರ್ಯಾಟ್‌ಕ್ಲಿಫ್ ಪಡೆದುಕೊಂಡಿದ್ದಾರೆ.
ರ್ಯಾಟ್‌ಕ್ಲಿಫ್‌ರ ಕಂಪೆನಿಯ ವೌಲ್ಯ 21.05 ಬಿಲಿಯ ಪೌಂಡ್ (ಸುಮಾರು 1.92 ಲಕ್ಷ ಕೋಟಿ ರೂಪಾಯಿ) ಎಂಬುದಾಗಿ ‘ಸಂಡೇ ಟೈಮ್ಸ್’ನ ವಾರ್ಷಿಕ ಶ್ರೀಮಂತರ ಪಟ್ಟಿ ಅಂದಾಜಿಸಿದೆ.
ಹಿಂದೂಜಾ ಸಹೋದರರಾದ ಶ್ರೀಚಂದ್ ಮತ್ತು ಗೋಪಿಚಂದ್‌ರ ಸಂಪತ್ತು 2017ರಿಂದ 4.44 ಬಿಲಿಯ ಪೌಂಡ್ (ಸುಮಾರು 40,500 ಕೋಟಿ ರೂ.)ನಷ್ಟು ಹೆಚ್ಚಳವಾಗಿ 20.64 ಬಿಲಿಯ ಪೌಂಡ್ (ಸುಮಾರು 1.88 ಲಕ್ಷ ಕೋಟಿ ರೂಪಾಯಿ) ಆಗಿದೆ.
ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಮತ್ತು ಅವರ ಕುಟುಂಬ ಸದಸ್ಯರು ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕುಸಿದು 5ನೇ ಸ್ಥಾನದಲ್ಲಿದ್ದಾರೆ. ಅವರ ಸಂಪತ್ತು 14.66 ಬಿಲಿಯ ಪೌಂಡ್ (ಸುಮಾರು 1.33 ಲಕ್ಷ ಕೋಟಿ ರೂಪಾಯಿ).