ಕೊಹ್ಲಿ ಕೌಂಟಿಯಲ್ಲಿ ಆಡುವ ನಿರ್ಧಾರಕ್ಕೆ ಗೋವೆರ್ ಟೀಕೆ

Update: 2018-05-15 18:42 GMT

ಹೊಸದಿಲ್ಲಿ, ಮೇ 15: ಅಫ್ಘಾನಿಸ್ತಾನ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿರುವ ನಿರ್ಧಾರದ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಗ್ರೇಟ್ ಡೇವಿಡ್ ಗೋವೆರ್ ಟೀಕಿಸಿದ್ದಾರೆ.

 ಕೊಹ್ಲಿ ಟೆಸ್ಟ್‌ನಿಂದ ದೂರ ಸರಿದು ಕೌಂಟಿ ತಂಡದಲ್ಲಿ ಆಡುವ ನಿರ್ಧಾರ ಕೈಗೊಂಡಿದ್ದರು. ಸರ್ರೆ ತಂಡದಲ್ಲಿ ಆಡಲಿರುವ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುವ ವಿಚಾರದ ಬಗ್ಗೆ ಗೋವೆರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮುಂದಿನ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಆಡಲಿದ್ದು, ಅವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕಾಗಿ ಕೊಹ್ಲಿ ಕೌಂಟಿಯಲ್ಲಿ ಆಡುವ ನಿರ್ಧಾರ ಕೈಗೊಂಡಿದ್ದಾರೆ.

 ಗೋವೆರ್ ನಿಲುವನ್ನು ಅವರ ತಂಡದ ಮಾಜಿ ಸಹ ಆಟಗಾರ ಬಾಬ್ ವಿಲ್ಸ್ ಬೆಂಬಲಿಸಿದ್ದಾರೆ. ಕೊಹ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಗೆ ತಯಾರಿ ನಡೆಸುವ ಉದ್ದೇಶಕ್ಕಾಗಿ ಕೌಂಟಿ ತಂಡದಲ್ಲಿ ಆಡುವ ನಿರ್ಧಾರ ಕೈಗೊಂಡಿರುವುದು ಮೂರ್ಖತನದ ನಿರ್ಧಾರವಾಗಿದೆ’’ ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್‌ಗಳ ಸರಣಿ ಆಗಸ್ಟ್ 1ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಬಳಿಕ ಮೂರು ಏಕದಿನ ಪಂದ್ಯಗಳು ನಿಗದಿಯಾಗಿದೆ.

 ಭಾರತ 2014ರಲ್ಲಿ ಇಂಗ್ಲೆಂಡ್‌ಗೆ ಕೊನೆಯ ಬಾರಿ ಪ್ರವಾಸ ಕೈಗೊಂಡಿತ್ತು. ಭಾರತ 1-3 ಅಂತದಲ್ಲಿ ಸೋಲು ಅನುಭವಿಸಿತ್ತು. ಕೊಹ್ಲಿ ಐದು ಇನಿಂಗ್ಸ್‌ಗಳಲ್ಲಿ 134 ರನ್ ಗಳಿಸಿದ್ದರು. ಅವರು ದಾಖಲಿಸಿದ ಗರಿಷ್ಠ ಸ್ಕೋರ್ 39 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News