ಬ್ಯಾಂಕ್ರಾಫ್ಟ್‌ಗೆ ಕ್ಲಬ್ ಕ್ರಿಕೆಟ್ ಕ್ಲೀನ್‌ಚಿಟ್

Update: 2018-05-15 18:47 GMT

ಪರ್ತ್, ಮೇ 15: ದಕ್ಷಿಣ ಆಫ್ರಿಕದಲ್ಲಿ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧ ಎದುರಿಸುತ್ತಿರುವ ಕ್ಯಾಮರೂನ್ ಬ್ಯಾಂಕ್ರಾಫ್ಟ್‌ಗೆ ವೆಸ್ಟರ್ನ್ ಆಸ್ಟ್ರೇಲಿಯ ಕ್ಲೀನ್‌ಚಿಟ್ ನೀಡಿದೆ. 25ರ ಹರೆಯದ ಆರಂಭಿಕ ಆಟಗಾರ ಬ್ಯಾಂಕ್ರಾಫ್ಟ್ ಮಾರ್ಚ್‌ನಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಸ್ಯಾಂಡ್‌ಪೇಪರ್‌ನಿಂದ ಚೆಂಡನ್ನು ಉಜ್ಜಿ ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ 9 ತಿಂಗಳ ಕಾಲ ನಿಷೇಧ ಎದುರಿಸಿದ್ದರು.

ನಾಯಕ ಸ್ಟೀವನ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್‌ಗೆ ಒಂದು ವರ್ಷ ಕಾಲ ನಿಷೇಧ ಹೇರಲಾಗಿತ್ತು.

ವೆಸ್ಟರ್ನ್ ಆಸ್ಟ್ರೇಲಿಯ ಪ್ರೀಮಿಯರ್ ಕ್ರಿಕೆಟ್ ಕ್ಲಬ್‌ನ 16 ಅಧಿಕಾರಿಗಳು ಸೋಮವಾರ ಸಭೆ ನಡೆಸಿದ್ದು, ವೆಲ್ಲಿಟನ್ ಕ್ಲಬ್‌ಗೆ ವಿಶೇಷ ಸ್ಥಾನಮಾನ ನೀಡಿತ್ತು.

ಬ್ಯಾಂಕ್ರಾಫ್ಟ್ ಕೇವಲ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಚೆಂಡು ವಿರೂಪ ಪ್ರಕರಣ ತನ್ನ ಜೀವನದ ಬೇಸರದ ಘಟನೆಯಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News