ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋಲು

Update: 2018-05-18 18:30 GMT

 ಹೊಸದಿಲ್ಲಿ, ಮೇ18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ 52ನೇ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 34 ರನ್‌ಗಳ ಸೋಲು ಅನುಭವಿಸಿದೆ.

ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 163 ರನ್‌ಗಳ ಸವಾಲನ್ನು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 128ರನ್ ಗಳಿಸಿತು.

ಆರಂಭಿಕ ದಾಂಡಿಗ ಅಂಬಟಿ ರಾಯುಡು 50 ರನ್(29ಎ, 4ಬೌ,4ಸಿ), ಶೇನ್ ವ್ಯಾಟ್ಸನ್ 14ರನ್, ಸುರೇಶ್ ರೈನಾ 15ರನ್, ಎಂಎಸ್ ಧೋನಿ 17ರನ್, ಸ್ಯಾಮ್ ಬಿಲ್ಲಿಂಗ್ಸ್ 1ರನ್, ಡ್ವೇಯ್ನ್ ಬ್ರಾವೋ 1 ರನ್ ಗಳಿಸಿ ಔಟಾದರು.

  ರವೀಂದ್ರ ಜಡೇಜ ಔಟಾಗದೆ 27ರನ್ ಮತ್ತು ದೀಪಕ್ ಚಹಾರ್ ಔಟಾಗದೆ 1 ರನ್ ಗಳಿಸಿದರು.

 ಡೆಲ್ಲಿ ತಂಡದ ಟ್ರೆಂಟ್ ಬೌಲ್ಟ್ 20ಕ್ಕೆ 2 ವಿಕೆಟ್,ಅಮಿತ್ ಮಿಶ್ರಾ 20ಕ್ಕೆ 2 ವಿಕೆಟ್, ಸಂದೀಪ್ ಲಮಿಚಾನೆ ಮತ್ತು ಶಾರ್ದುಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.

ಡೆಲ್ಲಿ 162/5

ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 162 ರನ್ ಗಳಿಸಿತ್ತು.

 ವಿಕೆಟ್ ಕೀಪರ್ ರಿಷಭ್ ಪಂತ್ 38 ರನ್ ಗಳಿಸಿರುವುದು ಡೆಲ್ಲಿ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

ವಿಜಯ್ ಶಂಕರ್ ಔಟಾಗದೆ 36 ರನ್ ಮತ್ತು ಹರ್ಷಲ್ ಪಟೇಲ್ ಔಟಾಗದೆ 36 ರನ್ ಸೇರಿಸಿದರು.

ಆರಂಭಿಕ ದಾಂಡಿಗರಾದ ಪೃಥ್ವಿ ಶಾ 17ರನ್

ಮತ್ತು ನಾಯಕ ಶ್ರೇಯಸ್ ಅಯ್ಯರ್ 19 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 5ರನ್, ಅಭಿಷೇಕ್ ಶರ್ಮಾ 2ರನ್ ಗಳಿಸಿದರು. 14.4 ಓವರ್‌ಗಳಲ್ಲಿ 97ಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಡೆಲ್ಲಿ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದ ವಿಜಯ್ ಶಂಕರ್ ಮತ್ತು ಹರ್ಷಲ್ ಪಟೇಲ್ 6ನೇ ವಿಕೆಟ್‌ಗೆ ಮುರಿದ ಜೊತೆಯಾಟದಲ್ಲಿ 65 ರನ್‌ಗಳ ಕೊಡುಗೆ ನೀಡಿದರು.

ಚೆನ್ನೈ ತಂಡದ ಲುಂಗಿ ಗಿಡಿ 14ಕ್ಕೆ 2 ವಿಕೆಟ್, ದೀಪಕ್ ಚಹಾರ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರು ತಲಾ 1 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News