​ಅಂತಿಮ ಪಂದ್ಯದಲ್ಲಿ ಚೆನ್ನೈಗೆ 5 ವಿಕೆಟ್‌ಗಳ ಜಯ

Update: 2018-05-20 18:29 GMT

ಪುಣೆ,ಮೇ 20: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ 56ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 154 ರನ್‌ಗಳ ಸವಾಲು ಪಡೆದ ಚೆನ್ನೈ ತಂಡ ಇನ್ನೂ 5 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿ ಗೆಲುವಿನ ದಡ ಸೇರಿತು.
ಸುರೇಶ್ ರೈನಾ ಔಟಾಗದೆ 61(48ಎ, 4ಬೌ,2ಸಿ), ದೀಪಕ್ ಚಹಾರ್(20ಎ,1ಬೌ,3ಸಿ) , ಮಹೇಂದ್ರ ಸಿಂಗ್ ಧೋನಿ ಔಟಾಗದೆ 16 ರನ್(7ಎ,1ಬೌ,1ಸಿ),ಹರ್ಭಜನ್ ಸಿಂಗ್ 19ರನ್, ಎಫ್‌ಡು ಪ್ಲೆಸಿಸ್ 14 ರನ್ ಗಳಿಸಿದರು.
  ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಲುಂಗಿ ಗಿಡಿ (10ಕ್ಕೆ 4) ದಾಳಿಗೆ ತತ್ತರಿಸಿ 19.4 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟಾಗಿದೆ.
ಕಿಂಗ್ಸ್ ಇಲೆವೆನ್ ತಂಡದ ಅಗ್ರ ಸರದಿಯ ದಾಂಡಿಗರಾದ ಲೋಕೇಶ್ ರಾಹುಲ್(7), ಕ್ರಿಸ್ ಗೇಲ್(0), ಆ್ಯರೊನ್ ಫಿಂಚ್(4) ಬೇಗನೇ ನಿರ್ಮಿಸಿದರು.
4 ಓವರ್‌ಗಳಲ್ಲಿ 16 ವಿಕೆಟ್ ಕಳೆದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಖಾತಗೆ ಮನೋಜ್ ತಿವಾರಿ(35), ಡೇವಿಡ್ ಮಿಲ್ಲರ್(24), ಕರುಣ್ ನಾಯರ್(54) ಮತ್ತು ಅಕ್ಷರ್ ಪಟೇಲ್(14) ಎರಡಂಕೆಯ ಕೊಡುಗೆ ನೀಡಿದರು.
  
ಲುಂಗಿ ಗಿಡಿಗೆ ಸಾಥ್ ನೀಡಿದ ಶಾರ್ದುಲ್ ಠಾಕೂರ್(33ಕ್ಕೆ 2), ಡ್ವೇಯ್ನೆ ಬ್ರಾವೋ (39ಕ್ಕೆ 2), ದೀಪಕ್ ಚಹಾರ್(30ಕ್ಕೆ 1), ರವೀಂದ್ರ ಜಡೇಜ(23ಕ್ಕೆ 1) ಕಿಂಗ್ಸ್ ಇಲೆವೆನ್ 20 ಓವರ್‌ಗಳ ಬ್ಯಾಟಿಂಗ್ ಪೂರ್ಣಗೊಳಿಸುವ ಮೊದಲೇ ಆಲೌಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News