ಐಪಿಎಲ್ ಕ್ವಾಲಿಫೈಯರ್-1: ಚೆನ್ನೈ ಗೆಲುವಿಗೆ 140 ರನ್ ಗುರಿ

Update: 2018-05-22 15:30 GMT

ಮುಂಬೈ, ಮೇ 22: ಐಪಿಎಲ್ ಟ್ವೆಂಟಿ-20 ಕ್ವಾಲಿಫೈಯರ್-1ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ 140 ರನ್ ಗುರಿ ನೀಡಿದೆ.

ಟಾಸ್ ಜಯಿಸಿದ ಚೆನ್ನೈ ನಾಯಕ ಎಂ.ಎಸ್. ಧೋನಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಚೆನ್ನೈ ತಂಡದ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಸನ್‌ರೈಸರ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು.

ಒಂದು ಹಂತದಲ್ಲಿ 88 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಸನ್‌ರೈಸರ್ಸ್ ತಂಡ ಬ್ರಾತ್‌ವೇಟ್(ಔಟಾಗದೆ 43,29 ಎಸೆತ, 1 ಬೌಂಡರಿ, 4 ಸಿಕ್ಸರ್)ಸಾಹಸದ ನೆರವಿನಿಂದ ಚೆನ್ನೈ ಗೆಲುವಿಗೆ 140 ರನ್ ಗುರಿ ನಿಗದಿಪಡಿಸಿತು. ಬ್ರಾತ್‌ವೇಟ್ ಹಾಗೂ ಭುವನೇಶ್ವರ್(7) 7ನೇ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 139ಕ್ಕೆ ತಲುಪಿಸಿದರು.

ಚೆನ್ನೈ ಪರ ಡ್ವೇಯ್ನ್ ಬ್ರಾವೊ(2-25)ಯಶಸ್ವಿ ಬೌಲರ್ ಎನಿಸಿಕೊಂಡರು. ದೀಪಕ್ ಚಹಾರ್(1-31), ಲುಂಗಿ ಗಿಡಿ(1-20), ಶಾರ್ದೂಲ್ ಠಾಕೂರ್(1-50) ಹಾಗೂ ರವೀಂದ್ರ ಜಡೇಜ(1-13) ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News