ಐಪಿಎಲ್ ಫೈನಲ್ ಫಿಕ್ಸ್ ಆಗಿದೆಯೇ?: ಟ್ವಿಟರಿಗರಿಂದ ಪ್ರಶ್ನೆಗಳ ಸುರಿಮಳೆ

Update: 2018-05-24 15:59 GMT

ಹೊಸದಿಲ್ಲಿ, ಮೇ 24: ಬುಧವಾರ ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 25 ರನ್ ಗಳಿಂದ ಮಣಿಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಕ್ವಾಲಿಫೈಯರ್ ಪ್ರವೇಶಿಸಿದೆ. ಫೈನಲ್ ಪ್ರವೇಶಕ್ಕಾಗಿ ಕೆಕೆಆರ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.

ಈ ನಡುವೆ ಹಾಟ್ ಸ್ಟಾರ್ ಬಿಡುಗಡೆಗೊಳಿಸಿದ ವಿಡಿಯೋವೊಂದು ಐಪಿಎಲ್ ವೀಕ್ಷಕರಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಟ್ ಸ್ಟಾರ್ ಪ್ರಸಾರ ಮಾಡಿದ್ದ ಫೈನಲ್ ವಿಡಿಯೋ ಪ್ರೋಮೋದಲ್ಲಿ ಚೆನ್ನೈ ಹಾಗು ಕೆಕೆಆರ್ ನಡುವಿನ ಪಂದ್ಯದ ದೃಶ್ಯಗಳಿತ್ತು. ಹಾಗಾದರೆ ಕೆಕೆಆರ್ ಮತ್ತು ಚೆನ್ನೈ ವಿರುದ್ಧ ಫೈನಲ್ ಪಂದ್ಯ ನಡೆಯಲಿದೆಯೇ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ನಂತರ ಹಾಟ್ ಸ್ಟಾರ್ ಈ ಜಾಹೀರಾತನ್ನು ತೆಗೆದುಹಾಕಿದೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಐಪಿಎಲ್ ಫೈನಲ್ ಫಿಕ್ಸ್ ಆಗಿದೆಯೇ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ, “ಎಲ್ಲಾ ಐಪಿಎಲ್ ಪಂದ್ಯಗಳು ಫಿಕ್ಸ್ ಆಗಿದೆ. ಟೂರ್ನಮೆಂಟ್ ಸ್ಕ್ರಿಪ್ಟೆಡ್ ಆಗಿದೆ. ಸಿಎಸ್ ಕೆ ಹಾಗು ಕೆಕೆಆರ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಏಕೆಂದರೆ ಈ ಎರಡೂ ತಂಡಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಶಾರೂಖ್ ಖಾನ್ ಹಾಗು ಅವರ ಗೆಳೆಯರು ಪಂದ್ಯ ವೀಕ್ಷಿಸಲು ಬರಲಿದ್ದಾರೆ. ಟೆಲಿವಿಶನ್ ರೇಟಿಂಗ್ ಹೆಚ್ಚಲಿದೆ” ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, “ಮ್ಯಾಚ್ ಹಾಗು ಐಪಿಎಲ್ ಫಿಕ್ಸ್ ಆಗಿದೆ. ಫೈನಲ್ ನಲ್ಲಿ ಕೆಕೆಆರ್ ವಿರುದ್ಧ ಸಿಎಸ್ ಕೆ… ವಿನ್ನರ್ : ಸಿಎಸ್ ಕೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News