ಇತಿಹಾಸ ಸೃಷ್ಟಿಸಿದ ಕ್ರಿಶ್ಚಿಯಾನೊ ರೊನಾಲ್ಡೊ
ಕೀವ್, ಮೇ 27: ಉಕ್ರೇನ್‌ನ ಕೀವ್‌ನಲ್ಲಿ ನಡೆದ ಪಂದ್ಯದಲ್ಲಿ ಲಿವರ್ ಪೂಲನ್ನು ಮಣಿಸಿದ ರಿಯಲ್ ಮ್ಯಾಡ್ರಿಡ್ 13ನೇ ಬಾರಿ ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿದೆ. ಇದೇ ವೇಳೆ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಐದು ಚಾಂಪಿಯನ್‌ಶಿಪ್ ಲೀಗ್ ಪ್ರಶಸ್ತಿಗಳನ್ನು ಜಯಿಸಿದ ಪ್ರಥಮ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆಯ ಮೂಲಕ ರೊನಾಲ್ಡೊ ಬಾರ್ಸಿಲೋನಾದ ಆ್ಯಂಡ್ರೆಸ್ ಇನಿಯೆಸ್ಟಾ ಮತ್ತು ಎಸಿ ಮಿಲನ್‌ನ ಕ್ಲಾರೆನ್ಸ್ ಸೀಡಾರ್ಫ್ ರನ್ನು ಹಿಂದಿಕ್ಕಿದ್ದಾರೆ. ಇವರಿಬ್ಬರೂ ತಲಾ ನಾಲ್ಕು ಪ್ರಶಸ್ತಿಗಳನ್ನು ಜಯಿಸಿದ್ದಾರೆ. ರೊನಾಲ್ಡೊ ಮೊದಲ ಬಾರಿಗೆ 2007-08ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿ ಪ್ರಶಸ್ತಿಯನ್ನು ಜಯಿಸಿದ್ದರು. ನಂತರ ನಾಲ್ಕು ಪ್ರಶಸ್ತಿಗಳನ್ನು ರಿಯಲ್ ಮ್ಯಾಡ್ರಿಡ್ ಪರ ಜಯಿಸಿದ್ದಾರೆ. ಗ್ಯಾರೆತ್ ಬೇಲ್ ಅವರ ಅದ್ಭುತವಾದ ಎರಡು ಗೋಲ್‌ಗಳ ನೆರವಿನಿಂದ ರಿಯಲ್ ಮ್ಯಾಡ್ರಿಡ್, ಲಿವರ್‌ಪೂಲನ್ನು 3-1 ಅಂತರದಲ್ಲಿ ಮಣಿಸಲು ಶಕ್ತವಾಯಿತು. ಸತತ ಮೂರು ವರ್ಷ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ತಂಡವಾಗಿ ರಿಯಲ್ ಮ್ಯಾಡ್ರಿಡ್ ಹೊರಹೊಮ್ಮಿದೆ. ಕಳೆದ ಐದು ವರ್ಷಗಳಲ್ಲಿ ರಿಯಲ್ ಮ್ಯಾಡ್ರಿಡ್ ಜಯಿಸಿದ ನಾಲ್ಕನೇ ಪ್ರಶಸ್ತಿ ಇದಾಗಿದ್ದು ಒಟ್ಟಾರೆಯಾಗಿ ಹದಿಮೂರು ಪ್ರಶಸ್ತಿಗಳನ್ನು ಜಯಿಸಿದೆ.