ಐದನೇ ಕ್ರಮಾಂಕದಲ್ಲಿ ಆಡಲು ಧೋನಿಗೆ ಕ್ರಿಕೆಟ್ ತಜ್ಞರ ಸಲಹೆ

Update: 2018-05-29 18:28 GMT

ಹೊಸದಿಲ್ಲಿ, ಮೇ 29: ಐಪಿಎಲ್‌ನ ನೂತನ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾಯಕ ಎಂಎಸ್ ಧೋನಿ ಭಾರತದ ಏಕದಿನ ಕ್ರಿಕೆಟ್ ತಂಡದಲ್ಲಿ ಆರನೇ ಕ್ರಮಾಂಕದ ಬದಲಿಗೆ 5ನೇ ಕ್ರಮಾಂಕದಲ್ಲಿ ಆಡಬೇಕೆಂದು ಕ್ರಿಕೆಟ್ ತಜ್ಞರು ಆಗ್ರಹಿಸಿದ್ದಾರೆ.

ಭಾರತದ ಮಾಜಿ ನಾಯಕ ಧೋನಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ.

ಮಾಜಿ ದಿಗ್ಗಜ ಆಟಗಾರರಾದ ಅಂಶುಮಾನ್ ಗಾಯಕ್ವಾಡ್, ಕೆ. ಶ್ರೀಕಾಂತ್ ಹಾಗೂ ಎಲ್.ಶಿವರಾಮಕೃಷ್ಣನ್ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ ಧೋನಿ 5ನೇ ಕ್ರಮಾಂಕದಲ್ಲಿ ಆಡಬೇಕು ಎಂದು ಒತ್ತಾಯಿಸಿದ್ದಾರೆ.ಮಾಜಿ ಆಯ್ಕೆಗಾರ ವಿಕ್ರಂ ರಾಥೋರ್ ಹಾಗೂ ಹಾಲಿ ದಿಲ್ಲಿ ಆಯ್ಕೆಗಾರ ಅತುಲ್ ವಾಸನ್ ಧೋನಿ ವಿಶ್ವದ ಶ್ರೇಷ್ಠ ಫಿನಿಶರ್ ಆಗಿದ್ದು ಅವರು ಅದೇ ಪಾತ್ರದಲ್ಲಿ ಮುಂದುವರಿಯಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

‘‘ಪಂದ್ಯದಲ್ಲಿ ಹಿಡಿತ ಸಾಧಿಸುವ ಧೋನಿಯ ಸಾಮರ್ಥ್ಯ ಅಪೂರ್ವವಾದುದು. ಒಂದು ವೇಳೆ ಅವರು ಅಗ್ರ ಸರದಿಯಲ್ಲಿ ಕ್ರೀಸ್‌ಗೆ ಅಂಟಿಕೊಂಡರೆ ಎದುರಾಳಿ ತಂಡಕ್ಕೆ ಸವಾಲಾಗುತ್ತಾರೆ. ಧೋನಿ 5ನೇ ಕ್ರಮಾಂಕದಲ್ಲಿ ಆಡಿದರೆ ಭಾರತಕ್ಕೆ ಸುಲಭವಾಗಿ ಗೆಲುವು ತಂದುಕೊಡಲು ಸಾಧ್ಯವಾಗುತ್ತದೆ’’ ಎಂದು ಗಾಯಕ್ವಾಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News