×
Ad

ಇಸ್ರೇಲ್ ಜೊತೆಗೆ ಇನ್ನೊಂದು ಯುದ್ಧ?: ಆತಂಕದಲ್ಲಿ ಫೆಲೆಸ್ತೀನ್ ನಾಗರಿಕರು

Update: 2018-05-31 22:59 IST

ಗಾಝಾ ಸಿಟಿ, ಮೇ 31: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿರುವ ತೀವ್ರ ವಾಯು ದಾಳಿಯ ಹಿನ್ನೆಲೆಯಲ್ಲಿ, ಇಲ್ಲಿನ ನಿವಾಸಿಗಳು ಇನ್ನೊಂದು ಭೀಕರ ಯುದ್ಧವನ್ನು ಎದುರು ನೋಡುತ್ತಿದ್ದಾರೆ.

ಇಸ್ರೇಲ್‌ನ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಟ್ಯಾಂಕ್‌ಗಳು ಮಂಗಳವಾರ ಮತ್ತು ಬುಧವಾರ ಮುಂಜಾನೆ ಈ ಪ್ರದೇಶದಲ್ಲಿರುವ ಹತ್ತಾರು ನೆಲೆಗಳ ಮೇಲೆ ದಾಳಿ ನಡೆಸಿವೆ. ಸಮೀಪದ ಜನವಸತಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಫೆಲೆಸ್ತೀನ್ ನಾಗರಿಕರು ನಿರಂತರ ಭೀತಿಯಲ್ಲಿ ಬದುಕುತ್ತಿದ್ದಾರೆ.

ಈ ದಾಳಿಗಳಲ್ಲಿ ಸಂಭವಿಸಿರುವ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.

ದಕ್ಷಿಣ ಇಸ್ರೇಲ್‌ನತ್ತ ಬಂಡುಕೋರರು ರಾಕೆಟ್ ಮತ್ತು ಮೋರ್ಟರ್ ದಾಳಿಗಳನ್ನು ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ.

ಈಜಿಪ್ಟ್ ಮಧ್ಯಪ್ರವೇಶದ ಬಳಿಕ, ಉಭಯ ಬಣಗಳು ಯುದ್ಧವಿರಾಮಕ್ಕೆ ಒಪ್ಪಿಗೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News