‘ಇಸ್ಲಾಮೋಫೋಬಿಯ’ ಬಗ್ಗೆ ತನಿಖೆ ನಡೆಸಿ: ಬ್ರಿಟನ್‌ನ ಮುಸ್ಲಿಮ್ ಕೌನ್ಸಿಲ್ ಒತ್ತಾಯ
Update: 2018-05-31 23:05 IST
ಲಂಡನ್, ಮೇ 31: ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ಅವರ ಕನ್ಸರ್ವೇಟಿವ್ ಪಾರ್ಟಿಯಲ್ಲಿರುವ ‘ಇಸ್ಲಾಮೋಫೋಬಿಯ’ ಬಗ್ಗೆ ಅಧಿಕೃತ ತನಿಖೆ ನಡೆಸುವಂತೆ ಕೋರಿ ಬ್ರಿಟನ್‌ನ ಮುಸ್ಲಿಮ್ ಕೌನ್ಸಿಲ್ ಮನವಿ ಸಲ್ಲಿಸಿದೆ.
ಕನ್ಸರ್ವೇಟಿವ್ ಪಕ್ಷದಲ್ಲಿ ಜನಾಂಗೀಯವಾದಿಗಳು ಮತ್ತು ಧಾರ್ಮಿಕ ಅಸಹಿಷ್ಣುಗಳಿಗೆ ಸ್ಥಳ ಇಲ್ಲದಂತೆ ಖಾತರಿಪಡಿಸುವುದಕ್ಕಾಗಿ ಪೂರ್ಣ ಪ್ರಮಾಣದ ಪರಿಶೋಧನೆ ನಡೆಸುವಂತೆ ಅದು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ಮುಸ್ಲಿಮ್ ಕೌನ್ಸಿಲ್, ಬ್ರಿಟನ್‌ನಲ್ಲಿನ 500ಕ್ಕೂ ಅಧಿಕ ಮಸೀದಿಗಳು, ಶಾಲೆಗಳು ಮತ್ತು ಅಸೋಸಿಯೇಶನ್‌ಗಳನ್ನು ಪ್ರತಿನಿಧಿಸುವ ಸ್ವತಂತ್ರ ಸಂಸ್ಥೆಯಾಗಿದೆ.