ಫಿಫಾ ವರ್ಲ್ಡ್ ಕಪ್ ನಲ್ಲಿ ಭಾರತದಿಂದ ಭಾಗವಹಿಸಲಿದ್ದಾರೆ ಈ ಇಬ್ಬರು !

Update: 2018-06-12 16:35 GMT

ಮಾಸ್ಕೊ, ಜೂ.12: ರಶ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಅವಕಾಶ ಪಡೆಯಲು ಭಾರತದ ತಂಡಕ್ಕೆ ಈ ಬಾರಿಯೂ ಸಾಧ್ಯವಾಗಲಿಲ್ಲ.. ಆದರೆ ಭಾರತದ ತಂಡ ಭಾಗವಹಿಸದಿದ್ದರೂ ಇಬ್ಬರು ಶಾಲಾ ಮಕ್ಕಳು ಪಂದ್ಯ ಆರಂಭಕ್ಕೂ ಮುನ್ನ ಚೆಂಡನ್ನು ಕೊಂಡೊಯ್ಯುವ ಅವಕಾಶ ಪಡೆದಿದ್ದಾರೆ.

   ಕರ್ನಾಟಕದ ಹತ್ತರ ಹರೆಯದ ಶಾಲಾ ಬಾಲಕ ರಿಷಿ ತೇಜ್ ಮತ್ತು ತಮಿಳುನಾಡಿನ 11ರ ಹರೆಯದ ಶಾಲಾ ಬಾಲಕ ನಥಾನಿಯಾ ಜೋನ್ ಕೆ ರಶ್ಯಾದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಅಧಿಕೃತ ಚೆಂಡಿನೊಂದಿಗೆ ಕಣಕ್ಕಿಳಿಯುವ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಶಾಲಾ ವಿದ್ಯಾರ್ಥಿಗಳು.

   ರಿಷಿ ತೇಜ್ ಜೂ.18ರಂದು ಬೆಲ್ಜಿಯಂ ಮತ್ತು ಪನಾಮ ತಂಡಗಳ ನಡುವಿನ ಪಂದ್ಯಕ್ಕಾಗಿ ಚೆಂಡಿನೊಂದಿಗೆ ಕಣಕ್ಕಿಳಿಯಲಿದ್ದಾರೆ. ನಥಾನಿಯಾ ಜೋನ್ ಜೂ. 22ರಂದು ಬ್ರೆಝಿಲ್-ಕೋಸ್ಟರಿಕಾ ಪಂದ್ಯಕ್ಕೂ ಮುನ್ನ ಅಧಿಕೃತ ಚೆಂಡಿನೊಂದಿಗೆ ಕ್ರೀಡಾಂಗಣಕ್ಕೆ ಇಳಿಯುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

 ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅವರು ರಿಷಿತೇಜ್ ಮತ್ತು ನಥಾಲಿಯಾ ಜೋನ್ ರಶ್ಯಾಕ್ಕೆ ತೆರಳಲು ಆಯ್ಕೆಯಾಗಿರುವುದನ್ನು ಮಂಗಳವಾರ ಪ್ರಕಟಿಸಿದ್ದಾರೆ.

ವಿಶ್ವದ 64 ಶಾಲಾ ವಿದ್ಯಾರ್ಥಿಗಳು ಈ ಅಪೂರ್ವ ಅವಕಾಶ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News