ಫುಟ್ಬಾಲ್ ವಿಶ್ವಕಪ್‌ ಉದ್ಘಾಟನಾ ಪಂದ್ಯ: ಸೌದಿ ಅರೇಬಿಯ ವಿರುದ್ಧ ರಶ್ಯಕ್ಕೆ ಭರ್ಜರಿ ಜಯ

Update: 2018-06-14 17:17 GMT

ಲುಝ್ನಿಕಿ, ಜೂ.14: ವಿಂಗರ್ ಡೆನಿಸ್ ಚೆರಿಶೆವ್ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಆತಿಥೇಯ ರಶ್ಯ ತಂಡ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 5-0 ಗೋಲುಗಳ ಅಂತರದಿಂದ ಜಯ ದಾಖಲಿಸಿದೆ.

ಲುಝ್ನಿಕಿ ಸ್ಟೇಡಿಯಂನ 78,011 ಪ್ರೇಕ್ಷಕರ ಸಮ್ಮುಖದಲ್ಲಿ ಗುರುವಾರ ನಡೆದ ವಿಶ್ವಕಪ್ ‘ಎ’ ಗುಂಪಿನ ಪಂದ್ಯದುದ್ದಕ್ಕೂ ರಶ್ಯ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.

12ನೇ ನಿಮಿಷದಲ್ಲಿ ಗೋಲು ಬಾರಿಸಿದ ಯುರಿ ಗಝಿಂಸ್ಕಿ ರಶ್ಯಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಡೆನಿಸ್ ಚೆರಿಶೆವ್ 43ನೇ ನಿಮಿಷದಲ್ಲಿ ಗೋಲು ಬಾರಿಸಿ ರಶ್ಯದ ಮುನ್ನಡೆಯನ್ನು 2-0ಗೆ ಏರಿಸಿದರು. ಅರ್ಟೆಮ್ ಡಿಯುಬಾ 71ನೇ ನಿಮಿಷದಲ್ಲಿ ಆಕರ್ಷಕ ಗೋಲು ಬಾರಿಸಿ ರಶ್ಯದ ಲೀಡ್‌ನ್ನು 3-0ಗೆ ವಿಸ್ತರಿಸಿದರು.

ಹೆಚ್ಚುವರಿ ಸಮಯದಲ್ಲಿ ಡೆನಿಸ್ ಚೆರಿಶೆವ್(90+1) ಹಾಗೂ ಅಲೆಕ್ಸಾಂಡರ್ ಗೊಲೊವಿನ್(90+4) ಇನ್ನೆರಡು ಗೋಲುಗಳನ್ನು ಬಾರಿಸುವ ಮೂಲಕ ರಶ್ಯಕ್ಕೆ ವಿಶ್ವಕಪ್‌ನ ಮೊದಲ ಗ್ರೂಪ್ ಪಂದ್ಯದಲ್ಲಿ ಭರ್ಜರಿ ಗೆಲುವು ತಂದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News