ವಿಶ್ವಕಪ್ ಫುಟ್ಬಾಲ್: ಬುರ್ಜ್ ಖಲೀಫಾದಲ್ಲಿ ಅತ್ಯಂತ ಎತ್ತರದ ನೇರಪ್ರಸಾರದ ಪರದೆ

Update: 2018-06-16 18:12 GMT

ದುಬೈ, ಜೂ.16: ರಶ್ಯದಲ್ಲಿ ಈಗ ಫುಟ್ಬಾಲ್ ವಿಶ್ವಕಪ್ ನಡೆಯುತ್ತಿದ್ದು ಜಗತ್ತಿನಾದ್ಯಂತ ಫುಟ್ಬಾಲ್ ಅಭಿಮಾನಿಗಳು ತಮ್ಮ ಇಷ್ಟದ ತಂಡಗಳನ್ನು ಪ್ರೋತ್ಸಾಹಿಸುವಲ್ಲಿ ವ್ಯಸ್ತವಾಗಿದ್ದಾರೆ. ಈ ಮಧ್ಯೆ ದುಬೈಯಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಫುಟ್ಬಾಲ್ ಲೈವ್ ಸ್ಕೋರ್‌ಬೋರ್ಡ್ ಹಾಕಲಾಗಿದ್ದು ಇದು ಜಗತ್ತಿನ ಎತ್ತರದ ಲೈವ್ ಸ್ಕೋರ್‌ಬೋರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸ್ಕೋರ್‌ಬೋರ್ಡ್‌ನಲ್ಲಿ ಒಂದು ತಿಂಗಳ ಕಾಲ ಎಲ್‌ಇಡಿ ವ್ಯವಸ್ಥೆಯ ಮೂಲಕ ಫುಟ್ಬಾಲ್ ಪಂದ್ಯದ ಅಂಕಗಳನ್ನು ಪ್ರದರ್ಶಿಸಲಾಗುವುದು. ಈ ಬೃಹತ್ ಎಲ್‌ಇಡಿ ಪರದೆಯ ಮೇಲೆ ಗೋಲ್ ಬಾರಿಸಿದ ತಂಡದ ಧ್ವಜವನ್ನು ಸಹ ಪ್ರದರ್ಶಿಸಲಾಗುವುದು. ಈ ಸ್ಕೋರ್‌ಬೋರ್ಡನ್ನು ಅತೀ ಎತ್ತರದಲ್ಲಿ ಹಾಕಿರುವ ಕಾರಣ ಬಹಳಷ್ಟು ದೂರದಲ್ಲಿರುವ ಜನರೂ ಫುಟ್ಬಾಲ್ ಸ್ಕೋರನ್ನು ವೀಕ್ಷಿಸಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News