18 ವಯಸ್ಸಿಗಿಂತ ಕೆಳಗಿನವರ ಫೇಸ್‌ಬುಕ್ ಪೇಜ್‌ಗಳಲ್ಲಿ ಆಯುಧ ಉಪಕರಣಗಳ ಜಾಹೀರಾತಿಗೆ ನಿಷೇಧ

Update: 2018-06-17 17:16 GMT

ಸ್ಯಾನ್‌ಫ್ರಾನ್ಸಿಸ್ಕೊ,ಜೂ.17: ಹದಿನೆಂಟು ವರ್ಷದೊಳಗಿನ ಬಳಕೆದಾರರ ಪೇಜ್‌ಗಳಲ್ಲಿ ಶಸ್ತ್ರಾಸ್ತ್ರ ಉಪಕರಣಗಳ ಜಾಹೀರಾತು ಪ್ರಕಟಿಸುವುದನ್ನು ನಿಷೇಧಿಸುವ ನಿಟ್ಟಿನಲ್ಲಿ ತನ್ನ ಜಾಹೀರಾತು ನೀತಿಯನ್ನು ಪರಿಷ್ಕರಿಸಿದೆ.

 ಅಮೆರಿಕದ ಪತ್ರಿಕೆಗಳಂತೆ, ಫೇಸ್‌ಬುಕ್ ಈ ಮೊದಲು ಆಯುಧಗಳ ಮಾರಾಟದ ಜಾಹೀರಾತುಗಳನ್ನು ನಿಷೇಧಿಸಿತ್ತು. ಇದೀಗ ಅದು 18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರ ಫೇಸ್‌ಬುಕ್ ಪೇಜ್‌ಗಳಲ್ಲಿ ಆಯುಧಗಳ ಬಳಕೆಗೆ ಪೂರಕವಾಗಿರುವ ಉತ್ಪನ್ನಗಳಾದ ಶಸ್ತ್ರಾಸ್ತ್ರ ಬೆಲ್ಟ್‌ಗಳನ್ನು ಅಥವಾ ಫ್ಲಾಶ್‌ಲೈಟ್‌ಗಳನ್ನು ಮತ್ತು ಪಿಸ್ತೂಲ್‌ಗಳನ್ನು ಇರಿಸುವ ಚೀಲ ಇತ್ಯಾದಿಗಳ ಜಾಹೀರಾತುಗಳನ್ನು ಪ್ರಸಾರವನ್ನು ಕೂಡಾ ನಿಷೇಧಿಸಿದೆ.

ಜೂನ್ 21ರಿಂದ ನೂತನ ಜಾಹೀರಾತು ನೀತಿ ಜಾರಿಗೆ ಬರಲಿದೆಯೆಂದು ಫೇಸ್‌ಬುಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಕಳೆದ ಮಾರ್ಚ್‌ನಲ್ಲಿ ಜನಪ್ರಿಯ ವೀಡಿಯೊ ಜಾಲತಾಣ ಯೂಟ್ಯೂಬ್ ಕೂಡಾ ಶಸ್ತ್ರಾಸ್ತ್ರಗಳು ಹಾಗೂ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳ ಮಾರಾಟವನ್ನು ಉತ್ತೇಜಿಸುವ ವೀಡಿಯೊಗಳನ್ನು ನಿಷೇಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News