ಜಲಾಲಬಾದ್: ಆತ್ಮಹತ್ಯಾ ದಾಳಿಗೆ 18 ಬಲಿ

Update: 2018-06-17 17:24 GMT

ಜಲಾಲಬಾದ್,ಜೂ.17: ಪೂರ್ವ ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತದಲ್ಲಿ ರವಿವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು, 45ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಜಲಾಲಬಾದ್‌ನಲ್ಲಿರುವ ನಂಗರ್‌ಹಾರ್ ಪ್ರಾಂತದ ಗವರ್ನರ್ ಅವರ ಕಚೇರಿಯ ಹೊರಗೆ ಆತ್ಮಹತ್ಯಾಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆಂದು, ಗವರ್ನರ್ ಅವರ ವಕ್ತಾರ ಅತಾವುಲ್ಲಾ ಖೊಗ್ಯಾನಿ ತಿಳಿಸಿದ್ದಾರೆ. ನಂಗರ್‌ಹಾರ್ ಪ್ರಾಂತದ ಗವರ್ನರ್ ಅವರ ಕಚೇರಿಯ ಸಮೀಪದಲ್ಲೇ ಭಾರತೀಯ ದೂತವಾಸ ಕಚೇರಿಯಿದೆ.

 ಈದುಲ್‌ಫಿತ್ರ್ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಏರ್ಪಟ್ಟಿದ್ದ ಕದನದ ವಿರಾಮದ ನಡುವೆ ನಡೆದ ಎರಡನೆ ಆತ್ಮಹತ್ಯಾ ದಾಳಿ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News