ನ್ಯೂಜೆರ್ಸಿ: ಕಲಾ ಉತ್ಸವದಲ್ಲಿ ಶೂಟೌಟ್;20 ಮಂದಿಗೆ ಗಾಯ

Update: 2018-06-17 17:26 GMT

  ನ್ಯೂಜೆರ್ಸಿ,ಜೂ.17: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆಯುತ್ತಿರುವ ಕಲಾಉತ್ಸವೊಂದರಲ್ಲಿ ರವಿವಾರ ನಸುಕಿನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಶೂಟೌಟ್‌ನಲ್ಲಿ 13 ವರ್ಷದ ಬಾಲಕ ಸೇರಿದಂತೆ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ 33ವರ್ಷದ ಶಂಕಿತ ದಾಳಿಕೋರನು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಘಟನೆಯಲ್ಲಿ 16ರಿಂದ 20 ಮಂದಿಗೆ ಗುಂಡು ತಗಲಿದ ಗಾಯಗಳಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಮೂಲಗಳು ತಿಳಿಸಿವೆ.

ಘಟನೆ ನಡೆದಾಗ ಸ್ಥಳದಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ದಾಳಿಕೋರನು ಮನಬಂದಂತೆ ಗುಂಡುಹಾರಿಸತೊಡಗಿದಾಗ ಭಯಭೀತರಾಗಿ ಜನರು ಓಡತೊಡಗಿದ್ದು, ಕಾಲ್ತುಳಿತವುಂಟಾಗಿ ಕೆಲವರು ಗಾಯಗೊಂಡಿದ್ದಾರೆಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News