ವಿಶ್ವಕಪ್: ಬೆಲ್ಜಿಯಂಗೆ 3-0 ಗೆಲುವು

Update: 2018-06-22 10:37 GMT

 ಸೋಚಿ, ಜೂ.18: ನಿರೀಕ್ಷೆಯಂತೆಯೇ ವಿಶ್ವದ ನಂ.3ನೇ ತಂಡ ಬೆಲ್ಜಿಯಂ ವಿಶ್ವಕಪ್ ಫುಟ್ಬಾಲ್ ಟೂರ್ನಿಯ 'ಜಿ' ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಪನಾಮ ತಂಡವನ್ನು 3-0 ಅಂತರದಿಂದ ಮಣಿಸಿತು.

ಸೋಮವಾರ ನಡೆದ ಪಂದ್ಯದಲ್ಲಿ ಮೊದಲ 45 ನಿಮಿಷಗಳ ಆಟದಲ್ಲಿ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧದಲ್ಲಿ ಮೂರು ಗೋಲುಗಳನ್ನು ಬಾರಿಸಿದ ಬೆಲ್ಜಿಯಂ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ವಿಶ್ವಕಪ್‌ನ್ನು ಗೆಲುವಿನೊಂದಿಗೆ ಆರಂಭಿಸಿತು.

 ಬೆಲ್ಜಿಯಂನ ಪರ ಡ್ರೈಸ್ ಮೆರ್ಟೆನ್ಸ್ 47ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ರೊಮೆಲು ಲುಕಾಕು 69ನೇ ಹಾಗೂ 75ನೇ ನಿಮಿಷದಲ್ಲಿ ಗೋಲು ಬಾರಿಸುವುದರೊಂದಿಗೆ ಬೆಲ್ಜಿಯಂಗೆ 3-0 ಅಂತರದಿಂದ ಗೆಲುವು ತಂದುಕೊಟ್ಟರು.

ಆರು ನಿಮಿಷಗಳ ಅಂತರದಲ್ಲಿ ಅವಳಿ ಗೋಲು ಬಾರಿಸಿದ ಲುಕಾಕು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News