​ಕೊಲಂಬಿಯಾಕ್ಕೆ ಸೋಲುಣಿಸಿದ ಜಪಾನ್

Update: 2018-06-22 10:29 GMT
ಜಪಾನ್ ತಂಡದ ಶಿಂಜಿ ಕಗಾವಾ ಮೊದಲ  ಗೋಲು ಬಾರಿಸಿದ ಕ್ಷಣ 

ಸಾರಂಸ್ಕ್, ಜೂ.19: ಫಿಫಾ ವಿಶ್ವಕಪ್‌ನ ‘ಎಚ್’ ಗುಂಪಿನ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಜಪಾನ್ 2-1 ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಜಪಾನ್ ಇದರೊಂದಿಗೆ ದಕ್ಷಿಣ ಅಮೆರಿಕದ ತಂಡವೊಂದನ್ನು ಮಣಿಸಿದ ಏಶ್ಯದ ಮೊದಲ ತಂಡವೆಂಬ ಇತಿಹಾಸ ಬರೆದಿದೆ.
 ಶಿಂಜಿ ಕಗಾವಾ (6ನೇ ನಿಮಿಷ) ಮತ್ತು ಒಸಾಕ (73ನೇ ನಿಮಿಷ) ಗೋಲು ಜಮೆ ಮಾಡಿ ಜಪಾನ್‌ಗೆ ಗೆಲುವು ತಂದು ಕೊಟ್ಟರು. ಕೊಲಂಬಿಯಾ ತಂಡದ ಕ್ವಿಂಟರ್ರೊ(39ನೇ ನಿಮಿಷ) ಏಕೈಕ ಗೋಲು ಜಮೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News